ಗೃಹಲಕ್ಷ್ಮಿ ಯೋಜನೆಯ 6 ಮತ್ತು 7ನೇ ಕಂತಿನ ಹಣ ಬೇಕಾ? ಈ ಕೆಲಸ ಕಡ್ಡಾಯ! gruha lakshmi scheme.

Gruha lakshmi:

Gruha lakshmi:ನಮಸ್ಕಾರ ಗೆಳೆಯರೆ ಈ ಒಂದು ಲೇಖನದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗದೇ ಇರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಮುಂದಿನ ಎಲ್ಲಾ ಕಂತುಗಳ ಗೃಹ ಲಕ್ಷ್ಮಿ ಹಣ ಜಮಾ ಆಗಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

 

ಸರ್ಕಾರವು ಹಲವಾರು ನಿಯಮಗಳನ್ನು ಕೈಗೊಂಡರು ಗೃಹ ಲಕ್ಷ್ಮಿ ಹಣವನ್ನು ಸಾಕಷ್ಟು ಅರ್ಹ ಮಹಿಳೆಯರ ಖಾತೆಗೆ ತಲುಪಿಸಲು ಆಗುತ್ತಿಲ್ಲ. ಸರ್ಕಾರವು ಪ್ರತಿ ತಿಂಗಳು ಸಾಕಷ್ಟು ಹಣ ಇದರ ಸಲುವಾಗಿ ಖರ್ಚು ಮಾಡುತ್ತಾ ಇದೆ.

ಇದನ್ನೂ ಓದಿ:Yuvanidhi scheme Karnataka! ಯುವ ನಿಧಿ ಸ್ವಯಂ ನಿರುದ್ಯೋಗ ಘೋಷಣೆ ಮಾಡುವುದು ಹೇಗೆ?

ಸರ್ಕಾರವು ಲಕ್ಷಾಂತರ ಮಹಿಳೆಯರಿಗೆ ₹2000 ಬ್ಯಾಂಕ್ ಖಾತೆಗೆ ಹಾಕುವ ಸಲುವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡುತ್ತಿದೆ. ಇಷ್ಟೆಲ್ಲಾ ಮಾಡಿದರು ಸಹ ಹಲವು ಮಹಿಳೆಯರ ಖಾತೆಗೆ ಹಣ ಬಂದು ಜಮಾ ಆಗುತ್ತಿಲ್ಲ.

 

ಅರ್ಹತೆ ಹೊಂದಿದ ಮಹಿಳೆಯರಿಗೆ ಇದೊಂದು ದೊಡ್ಡ ಸಮಸ್ಯೆ ಆಗಿದೆ. ಇದಲ್ಲದೆ ಸರ್ಕಾರಕ್ಕೂ ಕೂಡಾ ಅರ್ಹ ಫಲಾನುಭವಿಗಳ ಖಾತೆಗೆ ಹಣ ತಲುಪಿಸುವುದು ಒಂದು ಕಠಿಣ ಸಮಸ್ಯೆ ಆಗಿದೆ.

 

(gruha lakshmi scheme) ಗೃಹ ಲಕ್ಷ್ಮಿ ಹಣ ಜಮಾ ಆಗಬೇಕೆಂದರೆ ಹೀಗೆ ಮಾಡಿ.

ಸರ್ಕಾರವು ಫಲಾನುಭವಿ ಮತ್ತು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ತಲುಪಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಲೆ ಇದೆ. ಇದಲ್ಲದೆ ನಾವು ಕೂಡ ಕೆಲವು ಕೆಲಸಗಳನ್ನೂ ಸರ್ಕಾರ ಸೂಚಿಸಿದಂತೆ ಮಾಡಬೇಕು.

ಆಧಾರ್ KYC ಮತ್ತು ರೇಷನ್ ಕಾರ್ಡ್ ನ ಕೈಕ್ ಮತ್ತು ಬ್ಯಾಂಕ್ KYC ಮಾಡಿಸಿದರೆ ಖಂಡಿತ ಗೃಹ ಲಕ್ಷ್ಮಿ ಹಣ ಜಮಾ ಆಗುತ್ತೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಈಗ ಇದೆಲ್ಲ ಮಾಡಿಸಿದರು ಗೃಹ ಲಕ್ಷ್ಮಿ ಹಣ ಜಮಾ ಆಗುತ್ತಾ ಇಲ್ಲ. ಅದಕ್ಕಾಗಿ ಸರ್ಕಾರವು ಮತ್ತೆ ಕೆಲವು ಕ್ರಮಗಳನ್ನು ಕೈಗೊಂಡಿದೆ.

 

ಸರ್ಕಾರ ಹೊಸದಾಗಿ ಕೈಗೊಂಡ ಕ್ರಮ:

ಸಮಿತಿಯು ಹಣ ತಲುಪಿಸುವ ಸಲುವಾಗಿ ಪಂಚಾಯತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಕ್ಯಾಂಪ್ ಮತ್ತು ಗೃಹ ಲಕ್ಷ್ಮಿ ಅದಾಲತ್ ಗಳನ್ನು ಸ್ಥಾಪಿಸಿದೆ.

ಇದಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಹಾಗು ಆಶಾ ಕಾರ್ಯಕರ್ತೆಯರನ್ನು ಹಣ ಜಮಾ ಆಗದೆ ಇರುವ ಮಹಿಳೆಯರನ್ನು ಕಂಡುಹಿಡಿದು ಅವರ ಬ್ಯಾಂಕ್ ಅಥವ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆಯನ್ನು ತಿಳಿಸಬೇಕು ಎಂದೂ ಅವರಿಗೆ ಸೂಚಿಸಿತ್ತು. ಇದಾದ ಬಳಿಕವೂ ಕೆಲವು ಮಹಿಳೆಯರಿಗೆ ಹಣ ಖಾತೆಗೆ ಜಮಾ ಆಗಿಲ್ಲ. ಇದಕ್ಕೆ server ಕಾರಣ ಎಂದು ಸಮಿತಿ ತಿಳಿಸಿದೆ.

ಇವೆಲ್ಲ ಕಾರಣಗಳು ಪರಿಹಾರ ಆದ ನಂತರವೂ ಹಣ ಜಮಾ ಆಗದೇ ಇರುವುದಕ್ಕೆ ಈಗ ಒಂದು ಹೊಸ ಕಾರಣ ದೊರಕಿದೆ ಅದನ್ನು ಮಾಡಿದರೆ ನಿಮಗೆ ಖಂಡಿತ ಹಣ ಬರುತ್ತದೆ.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಲಿಂಕ್

CLICK HERE 

ಹಣ ಜಮಾ ಆಗದೇ ಇರುವ ಮಹಿಳೆಯರು ಹೀಗೆ ಮಾಡಿ!

ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವಾಗ ಆದಾಯ ತೆರಿಗೆ (tax) ಪಾವತಿ ಮಾಡುವ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ ಎಂದು ತಿಳಿಸಿತ್ತು. ಆದರೂ ಕೆಲವು ಆದಾಯ ತೆರಿಗೆ ಪಾವತಿ ಮಾಡುವ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಕಾರಣಕ್ಕಾಗಿ ಸುಮಾರು ಮಹಿಳೆಯರ ಅರ್ಜಿ ತಿರಸ್ಕರಿಸಲಾಗಿದೆ.

ಅರ್ಜಿಯನ್ನೂ ಈ ರೀತಿ ರದ್ದು ಮಾಡುವಾಗ 20000 ದಿಂದ 30000 ಅರ್ಹ ಮಹಿಳೆಯರ ಅರ್ಜಿ ಕೂಡ ತಿರಸ್ಕರವಾಗಿದೆ.

 

ಈ ಕಾರಣಕ್ಕಾಗಿ ನಿಮಗೇನಾದರೂ ಎಲ್ಲವೂ ಸರಿಯಿದ್ದು ಇನ್ನು ಹಣ ಜಮಾ ಆಗದೆ ಇದ್ದರೆ ನೀವು ನಿಮ್ಮ ಹತ್ತಿರದ ಶಿಶು ಅಭವೃದ್ಧಿ ಇಲಾಖೆಗೆ ಆದಾಯ ತೆರಿಗೆ ಪಾವತಿ ಮಾಡುವುದಿಲ್ಲ ಎಂದು ದೃಢಕರಣ ನೀಡಬೇಕು. ನಂತರ ಅವರು ಅದನ್ನು ಮೇಲಧಿಕಾರಿಗಳಿಗೆ ವರ್ಗಾವಣೆ ಮಾಡಿ ಆದಾಯ ತೆರಿಗೆ ಪಾವತಿ ಮಾಡುವವರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆಯುತ್ತಾರೆ. ನಂತರ ನಿಮಗೆ ಹಣ ಜಮಾ ಆಗುತ್ತೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ:Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!

ಈ ಮಾಹಿತಿ ಇಷ್ಟವಾದಲ್ಲಿ ಪ್ರತಿ ದಿನ ನಮ್ಮ ಮಾಹಿತಿ ಪಡೆಯಲು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ.

 

Leave a Reply

Your email address will not be published. Required fields are marked *