ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ |ಹೇಗೆ ಅರ್ಜಿ ಸಲ್ಲಿಸುವುದು? New ration card application 2024.

ನನ್ನ ಪ್ರೀತಿಯ ಎಲ್ಲಾ ಓದುಗರಿಗೂ ನಮಸ್ಕಾರಗಳು. ಈ ಒಂದು ಆರ್ಟಿಕಲ್ ಮುಖಾಂತರ ನಾನು ಹೊಸ APL ಮತ್ತು BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾವ ದಾಖಲೆಗಳು ಬೇಕು ಮತ್ತು ಯಾವಾಗ ಅರ್ಜಿ ಸಲ್ಲಿಸುವುದು ಈ ಎಲ್ಲಾ ಮಾಹಿತಿಗಳನ್ನು ನಿಮಗೆ ತಿಳಿಸುತ್ತೇನೆ.

ಮೇಲೆ ಹೇಳಿದಂತೆ ಹಲವು ಜನರು APL ಮತ್ತು BPL ರೇಷನ್ ಕಾರ್ಡ್ ಮಾಡಿಸಲು ವರ್ಷದಿಂದ ಕಾಯುತ್ತಾ ಇದ್ದಾರೆ. ಅಂತಹ ಜನರಿಗೆ ಸರ್ಕಾರ ಇದೀಗ ಸಿಹಿ ಸುದ್ದಿ ನೀಡಿದೆ. ಅದರ ಬಗ್ಗೆ ತಿಳಿಯಲು ಈ ಮಾಹಿತಿಯನ್ನು ಸಂಪೂರ್ಣ ಓದಿರಿ.

 

New ration card application 2024:

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಗಳನ್ನೂ ಜಾರಿಗೊಳಿಸಿತು. ಅದರಲ್ಲಿ ಅಕ್ಕಿಯ ಬದಲು ಒಬ್ಬರಿಗೆ ತಲ 170 ರೂಪಾಯಿಗಳು ಮತ್ತು ಪ್ರತಿ ರೇಷನ್ ಕಾರ್ಡ್ ಯಜಮಾನಿಗೆ ತಲ 2000 ರೂಪಾಯಿಗಳನ್ನು ಹಾಕುವ ಯೋಜನೆಗಳನ್ನು ಜಾರಿಗೊಳಿಸಿತು. ಯಾವಾಗಿನಿಂದ ರೇಷನ್ ಕಾರ್ಡ್ ಗಳಿಗಿದ್ದ ಬೆಲೆ ಹೆಚ್ಚಾಗುತ್ತಾ ಬಂತು. ಈಗ ಎಲ್ಲರೂ ಕಾಯುತ್ತಾ ಇದ್ದಾರೆ ಯಾವಾಗ ಹೊಸ ರೇಷನ್ ಕಾರ್ಡ್ ಅಪ್ಲಿಕೇಷನ್ ಶುರು ಮಾಡ್ತಾರೆ ಅಂತ.

 

ರೇಷನ್ ಕಾರ್ಡ್ ಅಪ್ಲಿಕೇಷನ್ ಹಾಕಿದವರಿಗೆ ಕಾರ್ಡು ವಿತರಣೆ:

ಆಹಾರ ಇಲಾಖೆಯ ಸಚಿವರದಂತ ಕೆ.ಹೆಚ್.ಮುನಿಯಪ್ಪ ಅವರು ತಿಳಿಸಿದಂತೆ ಈಗಾಗಲೆ ರೇಷನ್ ಕಾರ್ಡ್ ಅಪ್ಲಿಕೇಷನ್ ಹಾಕಿದವರಿಗೆ ಇದೆ ಮಾರ್ಚ್ 31 ರ ಒಳಗೆ ಕಾರ್ಡು ಗಳನ್ನು ವಿತರಣೆ ಮಾಡಲಾಗುವುದು.

 

APL,BPL ಕಾರ್ಡ್ ವಿತರಣೆ:

ವಿಧಾನ ಸಭೆಯಲ್ಲಿ ಗುರುವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕಿ ನಯನ ಮೋಟಮ್ಮ ಅವರು ಈಗಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ.ಪರಿಶೀಲನೆಯನ್ನು ಮಾರ್ಚ್ ತಿಂಗಳಿನಲ್ಲಿ ಮುಗಿಸಿ ಮಾರ್ಚ್ 31 ರ ಒಳಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುತ್ತೇವೆ ಎಂದಿದ್ದಾರೆ. ಅದು ಅಲ್ಲದೆ ಅನಾರೋಗ್ಯದ ತುರ್ತು ಪರಿಸ್ಥಿತಿ ಕಾರಣ 744 ಜನರಿಗೆ BPL ಕಾರ್ಡ್ ವಿತರಣೆ ಮಾಡಿದ್ದೇವೆ ಎಂದಿದ್ದಾರೆ.

ಆಹಾರ ಇಲಾಖೆ

New ration card application 2024 start date:

ಈಗಾಗಲೇ ಅರ್ಜಿ ಹಾಕಿದವರ ಕಾರ್ಡುಗಳನ್ನು ಮಾರ್ಚ್ 31 ರ ಒಳಗೆ ಪರಿಶೀಲಿಸಿ ವಿತರಣೆ ಮಾಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿದೆ. ಇದು ಮುಗಿದ ತಕ್ಷಣವೇ ಹೊಸ APL ಮತ್ತು BPL ಕಾರ್ಡು ಗಳ ಅರ್ಜಿಯನ್ನು April ತಿಂಗಳಿನಿಂದ 7ಶುರು ಮಾಡುತ್ತೇವೆ ಎಂದು ಸರ್ಕಾರ ಸೂಚನೆ ನೀಡಿದೆ.

 

ಇದನ್ನೂ ಸಹ ಓದಿ:ನಗರ ಭೂ ಸಾರಿಗೆ ನಿರ್ದೇಶನಲಯದಲ್ಲಿ ಉದ್ಯೋಗಾವಕಾಶಗಳು|ನಗರ ಭೂಸಾರಿಗೆ ಇಲಾಖೆ 2024.Urban transport recruitment 2024:

 

April ತಿಂಗಳಿನೊಳಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕದ ದಾಖಲೆಗಳು:

ಸರ್ಕಾರವು April ತಿಂಗಳಿನಿಂದ ಹೊಸ APL ಮತ್ತು BPL ರೇಷನ್ ಕಾರ್ಡ್ ಗಳ ಅರ್ಜಿಯನ್ನು ಶುರು ಮಾಡುತ್ತೇವೆ ಎಂದು ಸೂಚನೆ ನೀಡಿದೆ. ಅದಕ್ಕಾಗಿ April ತಿಂಗಳಿನೊಳಗೆ ಕೆಳಗೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ.

1. ಫೋನ್ ನಂಬರ್

2. ಆಧಾರ್ ಕಾರ್ಡ್

3. ವಾಸಸ್ಥಳ ಪ್ರಮಾಣ ಪತ್ರ

4. ಜಾತಿ ಪ್ರಮಾಣ ಪತ್ರ

5. ಆದಾಯ ಪ್ರಮಾಣ ಪತ್ರ

 

ಅರ್ಜಿ ಹಾಕುವ ವಿಧಾನ:

ಹೊಸ ರೇಷನ್ ಕಾರ್ಡ್ ಅರ್ಜಿ ಶುರು ಆದಮೇಲೆ ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಆನ್ಲೈನ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.

 

ಇದನ್ನೂ ಕೂಡ ಓದಿ:ಭಾರತೀಯ ಅಗ್ನಿಶಾಮಕ ಇಲಾಖೆ ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿ ಪ್ರಾರಂಭ |ministry of defence recruitment 2024 

 

ಈ ಮೇಲೆ ನೀಡಿರುವ ಮಾಹಿತಿ ಉಪಯುಕ್ತ ಆಗಿದ್ದಾರೆ ಮತ್ತೆ ಇದೆ ತರಹದ ರೇಷನ್ ಕಾರ್ಡ್ ಅಪ್ಡೇಟ್ ಅಥವಾ ಇನ್ನಿತರ ಸರ್ಕಾರದ ಯೊಜನೆಗಳ ಅಪ್ಡೇಟ್ ಸಲುವಾಗಿ ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಭೇಟಿ ನೀಡಿ.

Leave a Comment