Karnataka State budget 2024|ಕರ್ನಾಟಕದಲ್ಲಿ 30 ಸಾವಿರ ಹುದ್ದೆಗಳಿಗೆ ಘೋಷಣೆ! ಹೆಚ್ಚಾದ ನಿರೀಕ್ಷೆ!

Karnataka State budget 2024

 

Karnataka State budget:ನಮಸ್ಕಾರ ಸ್ನೇಹಿತರೆ ಮಾಹಿತಿಯ ಪ್ರಕಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 2024 ಮತ್ತು 2025 ನೇ ಸಾಲಿನ budget ವಿವರಗಳನ್ನು ಫೆಬ್ರವರಿ 16 ರಂದು ಘೋಷಿಸಲಿದ್ದಾರೆ. ಮಾಹಿತಿ ಪ್ರಕಾರ ಬಡ್ಜೆಟ್ನಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ವಿಷಯ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದರ ಪ್ರಕಾರ 25 ರಿಂದ 30 ಸಾವಿರ ಹುದ್ದೆಗಳ ನೇಮಕಕ್ಕೆ ಘೋಷಣೆ ನೀಡಬಹುದು ಎನ್ನಲಾಗಿದೆ.

 

ಹಲವು ಇಲಾಖೆಗಳು ಮೊದಲೇ ಕರ್ಣಾಟಕ ಲೋಕಸೇವಾ ಆಯೋಗಕ್ಕೆ ನೇಮಕ ಮಾಡಬೇಕಾಗಿರುವ ಹುದ್ದೆಗಳ ಮಾಹಿತಿ ಕುರಿತು ಪತ್ರ ಸಲ್ಲಿಕೆ ಮಾಡಿವೆ. ಇವಕ್ಕೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಗದ ಕಾರಣ ಅವು ಹಾಗೆ ಉಳಿದಿವೆ . ಅದಕ್ಕೆ ಈಗ ಕರ್ನಾಟಕದ ಮುಖ್ಯಮಂತ್ರಿಗಳದ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದರೆ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.

 

Karnataka State budget 2024 ರಲ್ಲಿ ಈ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕಟವಾಗಬಹುದು:

ದೊರಕಿರುವ ಮಾಹಿತಿಯ ಪ್ರಕಾರ ಹಣಕಾಸು ಇಲಾಖೆ 195 ಹುದ್ದೆಗಳು, ಗೃಹ ಇಲಾಖೆ 292, ಪಶು ಸಂಗೋಪನಾ ಇಲಾಖೆ 30, ಕೃಷಿ ಇಲಾಖೆ 34, ಡಿಪಿಆರ್ 92, ಆರೋಗ್ಯ 262, ಕಂದಾಯ 106, ಲೋಕೋಪಯೋಗಿ 512, ಕಾನೂನು 301 ಮತ್ತು ಸಾರಿಗೆ ನಿಗಮದಲ್ಲಿ 1650 ಹುದ್ದೆಗಳು ಸೇರಿದಂತೆ ಹಲವು ವಲಯಗಳ 

ಇದನ್ನೂ ಓದಿ:ಗೃಹಲಕ್ಷ್ಮಿ ಯೋಜನೆಯ 6 ಮತ್ತು 7ನೇ ಕಂತಿನ ಹಣ ಬೇಕಾ? ಈ ಕೆಲಸ ಕಡ್ಡಾಯ! gruha lakshmi scheme.

ಹುದ್ದೆಗಳ ಭರ್ತಿಗೆ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಒಟ್ಟು 2.5 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ಈ ಕಾರಣಕ್ಕಾಗಿ ಸಮರ್ಪಕವಾಗಿ ಯೋಜನೆಗಳನ್ನು ನೀಡಲು ಸಾಧ್ಯ ಆಗುತ್ತಿಲ್ಲ. ಈ ಖಾಲಿ ಇರುವಂತ ಹುದ್ದೆಗಳ ಕಾರಣ, ಇರುವ ಸರ್ಕಾರಿ ಸಿಬ್ಬಂದಿಗಳ ಮೇಲೆ ಒತ್ತಡ ಜಾಸ್ತಿ ಆಗಿದೆ . ಈ ಕಾರಣಕ್ಕಾಗಿ ಮುಖ್ಯ ಮಂತ್ರಿಗಳು ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ನೀಡಬಹುದು ಎನ್ನಲಾಗಿದೆ.

Karnataka State budget 2024 ರ ವಿವರಗಳು CLICK HERE 

ಕರ್ನಾಟಕ ಆಡಳಿತ ಆಯೋಗವು ಹುದ್ದೆಗಳ ನೇಮಕಾತಿಯನ್ನು ಕಡಿಮೆಗೊಳಿಸಲು ಸೂಚನೆ ನೀಡಿದೆ. ಆದರೆ ಜಲ ಸಂಪನ್ಮೂಲ, ಕೃಷಿ ಇಲಾಖೆ, ಪಶು ಸಂಗೋಪನೆ, ನೀರಾವರಿ ಇಂತಹ ಇಲಾಖೆಯ ಹುದ್ದೆಗಳ ನೇಮಕಾತಿ ಅನಿವಾರ್ಯ ಆಗಿದೆ.

 

ಹಲವು ಇಲಾಖೆಗಳಲ್ಲಿ ಉದ್ಯೋಗಗಳು ಖಾಲಿ ಇರುವ ಕಾರಣ ಸರಿಸುಮಾರು 1.5 ಲಕ್ಷ ಜನರನ್ನು ಹೊರ ಗುತ್ತಿಗೆಯಲ್ಲಿ ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದಾದರೂ ಹುದ್ದೆಗಳ ಪೂರೈಕೆ ಕಡಿಮೆ ಆಗಿಲ್ಲ. ಅದಕ್ಕಾಗಿ ಹುದ್ದೆಗಳ ನೇಮಕಾತಿ ಮಾಡಬೇಕೆಂಬ ವಿನಂತಿ ಸರ್ಕಾರಕ್ಕೆ ಮುಟ್ಟಿವೆ. ಇದರ ಜೊತೆಗೆ ಕರ್ನಾಟಕ ನೌಕರರ ಸಂಘ ಗಳಿಂದ 7ನೇಯ ರಾಜ್ಯ ವೇತನ ಆಯೋಗಕ್ಕೆ ಖಾಲಿ ಇದ್ದಂತ ಹುದ್ದೆಗಳ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ತಿಳಿಸಿದೆ. ಈ ಮನವಿಯನ್ನು ಒಪ್ಪಿದ ಸರ್ಕಾರ ತಕ್ಷಣ 384 ಹುದ್ದೆಗಳ ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯನ್ನು ಪ್ರಕಟಿಸಲಿದೆ.

 

ಸದ್ಯದ ಸರ್ಕಾರಿ ಹುದ್ದೆಗಳ ವಿವರ:

ನಮ್ಮ ರಾಜ್ಯದ ಜನಸಂಖ್ಯೆ  3 ಕೋಟಿ ಇದ್ದಾಗ 7 ಲಕ್ಷ ಉದ್ಯೋಗಗಳು ನೇಮಕಗೊಂಡಿದ್ದವು,ಆದರೆ ಈಗ ಜನಸಂಖ್ಯೆ 7ಕೋಟಿಗೆ ತಲುಪಿದರು ಕೂಡ ಹುದ್ದೆಗಳಲ್ಲಿ ಅಷ್ಟೇನು ಹೆಚ್ಚಳ ಆಗಿಲ್ಲ. ಪ್ರತಿ ವರ್ಷ ಸರ್ಕಾರಿ ನೌಕರರು ನಿವೃತ್ತಿ ಹೊಂದುತ್ತಾರೆ. ಆದರೆ ಅದಕ್ಕೆ ತಕ್ಕಂತೆ ನೌಕರರ ನೇಮಕಾತಿ ನಡೆಸುವುದಿಲ್ಲ. ಇದರಿಂದಾಗಿ ನೌಕರಿಯಲ್ಲಿರುವ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅದಕ್ಕಾಗಿ ಸರ್ಕಾರವು ಈಗ ನೇಮಕಾತಿ ಕೈಗೊಳ್ಳುವ ಅನಿವಾರ್ಯ ಬಂದಿದೆ.

 

ಒಂದು ವೇಳೆ ಉದ್ಯೋಗಗಳ ನೇಮಕಾತಿ ರಾಜ್ಯದ ಬಡ್ಜೆಟ್ ನಲ್ಲಿ ಘೋಷಣೆ ಆದರೆ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ನಡೆಸಿ ಹುದ್ದೆಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.

 

ಹೊಸ ನೇಮಕಾತಿ ಮಾಡುವುದರ ಜೊತೆಗೆ ಸರ್ಕಾರವು ಈಗಾಗಲೇ ರಚನೆ ಮಾಡಿರುವ 7ನೇ ರಾಜ್ಯ ವೇತನದ ಹಣದ 5ಹೊರೆಯನ್ನು ಹೊರ ಬೇಕಿದೆ.

 

ಒಟ್ಟಿನಲ್ಲಿ ಕರ್ನಾಟಕ ರಾಜ್ಯ ಬಜೆಟ್ ಮೇಲೆ ಜನರು ನೂರಾರು ಚಿಂತನೆಗಳನ್ನು ಇಟ್ಟಿದ್ದಾರೆ. ಜನರಿಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ:Yuvanidhi scheme Karnataka! ಯುವ ನಿಧಿ ಸ್ವಯಂ ನಿರುದ್ಯೋಗ ಘೋಷಣೆ ಮಾಡುವುದು ಹೇಗೆ?

ಈ ಲೇಖನದ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಪ್ರತಿ ದಿನ ಇದೇ ರೀತಿಯ ಸುದ್ದಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ.

 

3 thoughts on “Karnataka State budget 2024|ಕರ್ನಾಟಕದಲ್ಲಿ 30 ಸಾವಿರ ಹುದ್ದೆಗಳಿಗೆ ಘೋಷಣೆ! ಹೆಚ್ಚಾದ ನಿರೀಕ್ಷೆ!”

Leave a Comment