ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಅಹ್ವಾನ ! ಆ ಜಿಲ್ಲೆಯ ಮಾಹಿತಿ ಇಲ್ಲಿದೆ

Anganavadi jobs recruitment : ನಮಸ್ಕಾರ ಸ್ನೇಹಿತರೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಬರುವ ಅಂಗನವಾಡಿ ಸಹಾಯಕಿಯರ ನೇಮಕಾತಿಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ  ಕೊನೆಯ ದಿನಾಂಕ ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಮತ್ತು ಬೇಕಾಗುವ ದಾಖಲೆಗಳ ವಿವರ ಬಗ್ಗೆ ತಿಳಿಯಲು ಈ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ( ಡಬ್ಲ್ಯೂ ಸಿ ಡಿ ) ನೇಮಕಾತಿಗೆ ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕಿ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಉದ್ಯೋಗಕ್ಕೆ ಒಟ್ಟು ಆರು(6) ಜಿಲ್ಲೆಗಳಲ್ಲಿ ನೇಮಕಾತಿ ಮಾಡಲಾಗುತ್ತದೆ.ಅರ್ಹ ಮತ್ತು ಆಸಕ್ತಿವುಳ್ಳ ಅಭ್ಯರ್ಥಿಗಳು ಅಧಿಸೂಚನೆಯನ್ನು ಚೆನ್ನಾಗಿ ಓದಿ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿ ಮತ್ತು ಆ ಜಿಲ್ಲೆಗಳು ಯಾವ್ಯಾವು ಎಂದು ನನ್ನ ಲೇಖನದಲ್ಲಿ ಹೇಳುತ್ತೇನೆ ಆದಕಾರಣ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

ಯಾವ್ಯಾವ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳ  ನೇಮಕಾತಿ                

* ಬೆಂಗಳೂರು ಗ್ರಾಮೀಣ ಜಿಲ್ಲೆ
* ಬೆಂಗಳೂರು ನಗರ ಜಿಲ್ಲೆ
* ಬೆಳಗಾವಿ
* ಬೀದರ್
* ಹಾವೇರಿ
* ತುಮಕೂರು

ಈ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ನೀವು ಆಸಕ್ತಿ ಇರುವ ಅಭ್ಯರ್ಥಿಗಳು ಅವರು ಕೇಳಿರುವ ದಾಖಲೆಗಳ ವಿವರವನ್ನು ಸರಿಯಾಗಿ ನೀಡಿ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

ಇದನ್ನೂ ಓದಿ :ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು!ನಿಮಗೂ ಬೇಕಾ?

 ಹುದ್ದೆಯ ವಿವರ

01. ಅಂಗನವಾಡಿ ಕಾರ್ಯಕರ್ತೆ

02. ಅಂಗನವಾಡಿ ಸಹಾಯಕಿ

• ಖಾಲಿ ಇರುವ ಹುದ್ದೆಗಳ ಸಂಖ್ಯೆ

01. ಅಂಗನವಾಡಿ ಕಾರ್ಯಕರ್ತೆ :– 39 ಹುದ್ದೆ

02. ಅಂಗನವಾಡಿ ಸಹಾಯಕಿ :–113 ಹುದ್ದೆ

  ಅರ್ಜಿಯನ್ನು ಸಲ್ಲಿಸಲು 15/02/2024 ಕೊನೆಯ ದಿನಾಂಕವಾಗಿದೆ. ಅರ್ಜಿಯನ್ನು ಸಲ್ಲಿಸಲು ಕನಿಷ್ಠ ವಯಸ್ಸಿನ ಮಿತಿ 19 ವರ್ಷಗಳ ಮೇಲಾಗಿರಬೇಕು ಮತ್ತು ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳ ಒಳಗಾಗಿರಬೇಕು ಹಾಗಾದರೆ ಅರ್ಜಿಯನ್ನು ಸಲ್ಲಿಸಲು ಬರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ

01.  ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಹಾಗಾದರೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

        ಅಂಗನವಾಡಿ ಕಾರ್ಯಕರ್ತೆ ನೇಮಕಾತಿ ಸಂದರ್ಭದಲ್ಲಿ ಸರ್ಕಾರದ ಅಂಗೀಕೃತ ಸಂಸ್ಥೆಯಲ್ಲಿ ಡಿಎಸ್ಇಆರ್‌ಟಿ (DSERT) ಯಿಂದ ಇಸಿಸಿಇ (ECCE) ಡಿಪ್ಲೋಮೋ ಕೋರ್ಸ್, ಜೆ ಓ ಸಿ (JOC) ಕೋರ್ಸ್ ಎನ್ ಟಿ ಟಿ (NTT)  ಕೋರ್ಸ್ ಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೋಂ  ಸೈನ್ಸ್ ಸರ್ಟಿಫಿಕೇಟ್ ಕೋರ್ಸ್ ಒಂದು ವರ್ಷ ಅಥವಾ ಪೂರ್ವ ಪ್ರಾಥಮಿಕ ಪ್ರಮಾಣ ಪತ್ರ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮತ್ತುಅವರಿಗೆ ಐದು ( 05) ಬೋನಸ್ ಅಂಕಗಳನ್ನು ನೀಡಲಾಗುತ್ತದೆ.

02. ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್ ಎಸ್ ಎಲ್ ಸಿ(SSLC) ಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗಾದರೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಬೋನಸ್ ಅಂಕಗಳು ಎಂದರೆ ಏನು ಅದರ ಮಾಹಿತಿ ತಿಳಿದುಕೊಳ್ಳೋಣ.

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಸಿಡ್ ದಾಳಿಗೆ ತುತ್ತಾಗಿದವರು   ವಿಧವೆಯರ ಇಲಾಖೆಯ ನಿವಾಸಿಗಳು.ಮಾಜಿ ದೇವದಾಶಿಯರ ಮಗಳು. ಅಂಗವಿಕಲರು. ವಿಧವೆಯರು. ಈ ಮಹಿಳೆಯರಿಗೆ ಐದು ಅಂಕಗಳ ಬೋನಸ್ ದೊರೆಯುತ್ತದೆ. ಈ ರೀತಿಯಾಗಿಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆಬೋನಸ್ ಅಂಕಗಳನ್ನು ರಾಜ್ಯ ಸರ್ಕಾರ ನೀಡುತ್ತದೆ.

ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಲಿಂಕ್ ಇದಾಗಿದೆ.

       https://anganwadirecruit.kar.nic.in/

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅವರ ಕೇಳಿರುವ ದಾಖಲಾತಿಗಳ ವಿವಾರವನ್ನು ಸರಿಯಾಗಿ ನೀಡಿ ಅರ್ಜಿಯನ್ನು ಸಲ್ಲಿಸಿ. ಇನ್ನೂ ಹೆಚ್ಚಿನ ಮಾಹಿತಿಯನ್ನು ಗೌರ್ಮೆಂಟ್ ವೆಬ್ ಸೈಟ್ ಮೂಲಕ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *