Prize money scholarship 2024: ನಮಸ್ಕಾರ ಪ್ರೀತಿಯ ಓದುವರೇ ಈ ಒಂದು ಲೇಖನದಲ್ಲಿ ನಾನು ನಿಮಗೆ Prize money scholarship 2024 ರ ಮಾಹಿತಿಯನ್ನು ನೀಡುತ್ತಿದ್ದೇನೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಪೂರ್ಣವಾಗಿ ಓದಿ.
ಹೌದು ವಿದ್ಯಾರ್ಥಿಗಳೇ ಈ ಒಂದು ಲೇಖನದಲ್ಲಿ Prize money scholarship 2024 ರ ಅರ್ಜಿಯನ್ನು ಹಾಕಲು ಯಾರ್ಯಾರು ಅರ್ಹರು, ಯಾವ ದಾಖಲಾತಿಗಳು ಬೇಕು, ಹೇಗೆ ಅರ್ಜಿಯನ್ನು ಹಾಕುವುದು, ಅರ್ಜಿ ಹಾಕುವ ವಿಧಾನ, ಅರ್ಜಿ ಹಾಕಲು ಕೊನೆಯ ದಿನಾಂಕ ಮತ್ತು ಅರ್ಜಿ ಹಾಕಿದ ನಂತರ ಮಾಡಬೇಕಾದ ಕೆಲಸ ಏನು ಎಲ್ಲಾ ವಿಷಯಗಳನ್ನು ಈ ಕೆಳಗೆ ಸಂಪೂರ್ಣವಾಗಿ ನೀಡಲಾಗಿದೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಸರ್ಕಾರವು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪಿಯುಸಿ, ಡಿಪ್ಲೊಮಾ, ಪದವಿ, ಪಿಜಿ ಮತ್ತು ಇನ್ನಿತರ ಉನ್ನತ ಪದವಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರೋತ್ಸಾಹ ಧನವನ್ನು ನೀಡುತ್ತದೆ. ಇದೀಗ ಈ ವರ್ಷದ ಪ್ರೋತ್ಸಾಹ ಧನಕ್ಕೆ ಅರ್ಜಿ ಶುರುವಾಗಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಅರ್ಹತೆಗಳನ್ನು ಕೆಳಗೆ ನೀಡಲಾಗಿದೆ.
Prize money scholarship 2024:
ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಪರಿಶಿಷ್ಟ ಜಾತಿ (SC )ಮತ್ತು ಪರಿಶಿಷ್ಟ ಪಂಗಡದ (ST) ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಪ್ರತಿ ವರ್ಷ ನೀಡುತ್ತಿದೆ. ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಶುರುವಾಗಿದ್ದು ಈ ಕೆಳಗಿನ ಅಧಿಕೃತ ನಿಮ್ಮ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.
Prize money scholarship 2024 ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಯಾವ ವಿದ್ಯಾರ್ಥಿಗಳಿಗೆ ಎಸ್ಟು ಹಣ?
1. ಪಿಯುಸಿ ಮತ್ತು ಡಿಪ್ಲೋಮೋ ಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 20000 ರೂಪಾಯಿಗಳು ನೀಡಲಾಗುತ್ತದೆ.
2. ಯಾವುದೇ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ 25,000 ನೀಡಲಾಗುತ್ತದೆ.
3. ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ 30,000 ನೀಡಲಾಗುತ್ತದೆ.
ಇದನ್ನು ಓದಿ:KEB recruitment 2024|ವಿದ್ಯುತ್ ಇಲಾಖೆಯ ಹುದ್ದೆಗಳ ನೇಮಕಾತಿ|ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
1. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದವರು(ST )ಆಗಿರಬೇಕು.
2. ಪರೀಕ್ಷೆಯಲ್ಲಿ ಮೊದಲ ಬಾರಿಗೆ ಪಾಸಾಗಿರಬೇಕು.
3. ಅರ್ಜಿ ಹಾಕಲು ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
Prize money scholarship 2024 ಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು:
1. ಅಭ್ಯರ್ಥಿಯ ಆಧಾರ್ ಕಾರ್ಡ್
2. ಅಭ್ಯರ್ಥಿಯ ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್
3. ಅಭ್ಯರ್ಥಿಯ ಫೋಟೋ
4. ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ
5. ಅಭ್ಯರ್ಥಿಯ ಆದಾಯ ಪ್ರಮಾಣ ಪತ್ರ
6. ಅಭ್ಯರ್ಥಿಯ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ಗಳು
7. ಅಭ್ಯರ್ಥಿಯ ಬ್ಯಾಂಕ್ ಪಾಸ್ ಬುಕ್
8. ಅಭ್ಯರ್ಥಿಯ ಇಮೇಲ್ ಐಡಿ
9. ಫೋನ್ ನಂಬರ್
ಇದನ್ನೂ ಸಹ:ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ |ಹೇಗೆ ಅರ್ಜಿ ಸಲ್ಲಿಸುವುದು? New ration card application 2024.
ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
1. ಪರಿಶಿಷ್ಟ ಜಾತಿ (SC )ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್ ಮಾಡಿ.
2. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಹಾಕುವ ವಿಧಾನಗಳು:
1. ನಿಮ್ಮ ಜಾತಿಯ ಅನುಗುಣವಾಗಿ ಮೇಲೆ ನೀಡಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
2. ನಂತರ ಫಾರ್ಮ್ ಓಪನ್ ಆಗುತ್ತದೆ.
3. ಅಲ್ಲಿ ನಿಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
4. ನಿಮ್ಮ ಮಾರ್ಕ್ಸ್ ಕಾರ್ಡ್ ಗಳ ಅಂಕಗಳನ್ನು ಖಚಿತಪಡಿಸಿಕೊಂಡು ಭರ್ತಿ ಮಾಡಿ.
5. ನಂತರ ನಿಮ್ಮ ಫೋಟೋ, ಮಾರ್ಕ್ಸ್ ಕಾರ್ಡ್ ಇನ್ನಿತರ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
6. ನಂತರ ಸಬ್ಮಿಟ್ ಮಾಡಿ ಮುಂದಿನ ಭವಿಷ್ಯಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
ಈ ಒಂದು ಮಾಹಿತಿ ನಿಮಗೆ ಉಪಯುಕ್ತ ಆಗಿದ್ದಾರೆ ನಿಮ್ಮ ಗೆಳೆಯರಿಗೆ ಶೇರ್ ಮಾಡಿ ಸಪೋರ್ಟ್ ಮಾಡಿ. ಇದೆ ತರಹದ ಮಾಹಿತಿಗಾಗಿ ಪ್ರತಿ ದಿನ 4ವೆಬ್ ಸೈಟ್ ಭೇಟಿ ನೀಡಿ.