PAN card in mobile:
ನಮಸ್ಕಾರ ಗೆಳೆಯರೇ ಒಂದು ಲೇಖನದಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್(pan card)ಗೆ ಹೇಗೆ ಅರ್ಜಿ ಸಲ್ಲಿಸಬಹುದು ನಮ್ಮ ಮಾಹಿತಿಯನ್ನು ಸಂಪೂರ್ಣವಾಗಿ ನಿಡುತ್ತಿದ್ದೇನೆ. ಪ್ಯಾನ್ ಕಾರ್ಡ್ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿ ಹಾಕುವಾಗ ಪಾಲಿಸಬೇಕಾದ ಹಂತಗಳು ಈ ಕೆಳಗೆ ನೀಡಲಾಗಿದೆ.
ಹೌದು ಗೆಳೆಯರೇ ಹೌದು ಗೆಳೆಯರೇ ಮೇಲೆ ಹೇಳಿದಂತೆ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿಯನ್ನು ಹಾಕಬಹುದು. ಪ್ಯಾನ್ ಕಾರ್ಡ್ (pan card)ಈಗಿನ ಸಮಯದಲ್ಲಿ ಐಡಿ ಪ್ರೂಫ್ ಸಲುವಾಗಿ ಕೇಳುವಂತಹ ಬಹು ಮುಖ್ಯವಾದ ಕಾರ್ಡ್ ಆಗಿದೆ.
PAN card in mobile:ಆದ್ದರಿಂದ ನಿಮ್ಮದಾಗಿರಲಿ ಅಥವಾ ನಿಮ್ಮ ಮನೆಯವರಾಗಿರಲಿ ಹಾಗೂ ನಿಮ್ಮ ಗೆಳೆಯ ರದಾಗುರಲಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಕೆಳಗೆ ನೀಡಿರುವ ದಾಖಲೆಗಳು ಮತ್ತು ಅರ್ಜಿ ಹಾಕಲು ಪಾಲಿಸಬೇಕಾದಂತಗಳನ್ನು ನೋಡಿಕೊಂಡು ಅರ್ಜಿಯನ್ನು ಹಾಕಿ.
PAN card in mobile ಗೆ ಬೇಕಾಗುವ ದಾಖಲಾತಿಗಳು:
1. ಫೋನ್ ನಂಬರ್
2. ಆಧಾರ್ ಕಾರ್ಡ್
3. ಹುಟ್ಟಿದ ದಿನಾಂಕ
4. ನಿಮ್ಮ ಮನೆಯವರ ಯಾರಾದರೂ pan card
5. ಇ-ಮೇಲ್ ಐಡಿ
ಇದನ್ನೂ ಓದಿ:10ನೇ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗಾವಕಾಶಗಳು|forest gaurd recruitment karnataka.
PAN card in mobile ನ ಅಧಿಕೃತ ವೆಬ್ ಸೈಟ್:
ಈ ಮೇಲೆ ನೀಡಲಾದ ದಾಖಲಾತಿಗಳಿಂದ ನಿಮ್ಮ ಮೊಬೈಲ್ ನಲ್ಲಿ ನೀವು ಪ್ಯಾನ್ ಕಾರ್ಡ್ ಗೆ ಸುಲಭವಾಗಿ ಅರ್ಜಿ ಹಾಕಬಹುದು. ಅರ್ಜಿ ಹಾಕಲು ಕೆಳಗೆ ಅಧಿಕೃತ ಲಿಂಕ್ ನೀಡಲಾಗಿದೆ.
ಅರ್ಜಿ ಹಾಕಲು ಇಲ್ಲಿ ಕ್ಲಿಕ್
PAN card in mobile ಗೆ ಅರ್ಜಿ ಹಾಕುವ ವಿಧಾನ:
1. ಮೊದಲು ಮೇಲೆ ನೀಡಿರುವ ಪಾನ್ ಕಾರ್ಡ್ ಗೆ ಅರ್ಜಿ ಹಾಕುವ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.
2. ನಂತರ ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಇಂಡಿಯನ್ ಸಿಟಿಜನ್ ಅಂತ ಸೆಲೆಕ್ಟ್ ಮಾಡಿ.
3. ಕೆಳಗೆ ನಿಮ್ಮ ಹೆಸರು, ಹುಟ್ಟಿದ ದಿನಾಂಕ ,ಫೋನ್ ನಂಬರ್ ಮತ್ತು ಇಮೇಲ್ ಐಡಿ ಗಳನ್ನು ಭರ್ತಿ ಮಾಡಿ ಹಾಗು ಕೆಳಗೆ ನೀಡಿರುವ ಕ್ಯಾಪ್ಚರ್ ಕೋಡ್ ಅನ್ನು ಎಂಟರ್ ಮಾಡಿ ಸಬ್ಮಿಟ್ ಮಾಡಿ.
4. ಸಬ್ಮಿಟ್ ಮಾಡಿದ ನಂತರ ಅಲ್ಲಿ ನಿಮಗೆ ಒಂದು ಟೋಕನ್ ನಂಬರ್ ಬರುತ್ತದೆ ಅದನ್ನು ನೋಟ್ ಮಾಡಿಟ್ಟುಕೊಳ್ಳಿ. ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
5. ನೆನಪಿಟ್ಟುಕೊಳ್ಳಿ ಈ ಟೋಕನ್ ನಂಬರ್ ಸಿಕ್ಕ ನಂತರ ಮುಂದಿನ ಅಪ್ಲಿಕೇಶನ್ ಅನ್ನು 13 ದಿನದ ಒಳಗೆ ಪೂರ್ತಿ ಮಾಡಬೇಕು ಇಲ್ಲವಾದರೆ ಇದು expire ಆಗುತ್ತದೆ.
6. ಕಂಟಿನ್ಯೂ ಮಾಡಿದ ನಂತರ ಅಲ್ಲಿ 3 ಮೋಡ್ ಗಳಿರುತ್ತವೆ. ಅದರಲ್ಲಿ 2 ಮೋಡ್ apply through scanned image ಅನ್ನು ಸೆಲೆಕ್ಟ್ ಮಾಡಿ.
7. ನಂತರ ಫಾರ್ಮ್ ಓಪನ್ ಆಗುತ್ತೆ ಅಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ಡೀಟೇಲ್ಸ್ ಹಾಕಿ.
8. ಕೆಳಗೆ ನಿಮ್ಮ ಪೇರೆಂಟ್ಸ್ ಸೆಕ್ಷನ್ ನಲ್ಲಿ ನಿಮಗೆ ತಂದೆ ಹೆಸರು ಬೇಕಾದರೆ ನಿಮ್ಮ ತಂದೆ ಡೀಟೇಲ್ಸ್ ಫೀಲ್ ಮಾಡಿ.
9. ನಿಮಗೇ ಕಾರ್ಡ್ ನಲ್ಲಿ ತಾಯಿ ಹೆಸರು ಬೇಕಾದರೆ, ನಿಮ್ಮ ತಾಯಿಯ ಡೀಟೇಲ್ಸ್ ಹಾಕಿ.
10. ನಂತರ ಎರಡನೇ ಹಂತದಲ್ಲಿ ನಿಮ್ಮ ಇನ್ಕಮ್ ಅನ್ನು ಸೆಲೆಕ್ಟ್ ಮಾಡಿ.
11. ಕೆಳಗೆ ನಿಮ್ಮ ಮನೆಯ ಪೂರ್ಣ ಅಡ್ರೆಸ್ ಅನ್ನು ಹಾಕಿರಿ.
12. ನಂತರ ನಿಮ್ಮ ಫೋನ್ ನಂಬರ್ ಮತ್ತು ಇ-ಮೇಲ್ ಐಡಿಯನ್ನು ಭರ್ತಿ ಮಾಡಿ.
13. ಕೆಳಗೆ ರಿಪ್ರಸೆಂಟೇಟಿವ್ ಅಸಿಸ್ಟೆಂಟ್ ಅಂತ ಇರುತ್ತೆ ಅಲ್ಲಿ ನಿಮಗೆ ಮೈನರ್ ಪಾನ್ ಕಾರ್ಡ್ ಬೇಕಿದ್ದರೆ ಎಸ್ ಅಂತ ಕ್ಲಿಕ್ ಮಾಡಿ ಇಲ್ಲವಾದರೆ ನೋ ಅಂತ ಕ್ಲಿಕ್ ಮಾಡಿ.next ಅಂತ ಕೊಡಿ.
14. ನಂತರ ನಿಮ್ಮ ದೇಶ ,ರಾಜ್ಯ ಮತ್ತು ಊರನ್ನು ಸೆಲೆಕ್ಟ್ ಮಾಡಿ ಫೆಚ್ ಅಂತ ಕೊಡಿ.
15. ನಂತರ ನಿಮ್ಮ ಐಡೆಂಟಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ಗೆ ಆಧಾರ್ ಕಾರ್ಡ್ ಅನ್ನು ಕೊಡಬೇಕಾಗುತ್ತದೆ.
16. ನಿಮ್ಮ ಡೇಟ್ ಆಫ್ ಬರ್ತ್ ಗೆ ಯಾವುದಾದರು ಮಾರ್ಕ್ಸ್ ಕಾರ್ಡ್ ಅಥವಾ ಆಧಾರ್ ಕಾರ್ಡನ್ನು ಕೂಡ ಕೊಡಬಹುದು.
17. ನಿಮ್ಮ ಅಡ್ರೆಸ್ ಎಲ್ಲ ಹಾಕಿದ ನಂತರ ಕೊನೆಯದಾಗಿ ಫೋಟೋ ಮತ್ತು ಸಿಗ್ನೇಚರ್ ಅಪ್ಲೋಡ್ ಮಾಡುವ ಸೆಕ್ಷನ್ ಬರುತ್ತದೆ.
18. ಅಲ್ಲಿ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಿಗ್ನೇಚರ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
19. ನಂತರ ಅರ್ಜಿ ಹಾಕುವಾಗ ನೀಡಿದ ಆಧಾರ್ ಕಾರ್ಡ್ ಮತ್ತು ಮಾರ್ಕ್ಸ್ ಕಾರ್ಡ್ ಗಳ ಫೋಟೋವನ್ನು ಕೂಡ ಅಪ್ಲೋಡ್ ಮಾಡಿ.
20. ನಂತರ ನೀವು ನೀಡಿದ ಎಲ್ಲ ದಾಖಲೆಗಳನ್ನು ಇನ್ನೊಂದು ಸಲ ನೋಡಿ ಖಚಿತ ಮಾಡಿಕೊಂಡು ಸಬ್ಮಿಟ್ ಅಂತ ಕೊಡಿ.
21. ನಂತರ ಪೇಮೆಂಟ್ ಆಪ್ಷನ್ ಓಪನ್ ಆಗುತ್ತೆ ಅಲ್ಲಿ ಆಪ್ಷನ್ ಸೆಲೆಕ್ಟ್ ಮಾಡಿಕೊಂಡು ಟರ್ಮ್ಸ್ ಅಂಡ್ ಕಂಡೀಷನ್ ಎಕ್ಸಿಪ್ಟ್ ಮಾಡಿ ಪ್ರೋಸೀಡ್ ಅಂತ ಕೊಡಿ.
22. ನಂತರ ಅಲ್ಲಿ ನಿಮ್ಮ ಮೋಡ ಆಫ್ ಪೇಮೆಂಟ್ ಅನ್ನು ಸೆಲೆಕ್ಟ್ ಮಾಡಿ, ಪೇಮೆಂಟ್ ಅನ್ನು ಪೂರ್ಣಗೊಳಿಸಿ.
23. ಪೇಮೆಂಟ್ ಆದ ನಂತರ ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ ಕಂಟಿನ್ಯೂ ಅಂತ ಕ್ಲಿಕ್ ಮಾಡಿ.
24. ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ನಂಬರ್ಗೆ ಒಟಿಪಿ ಬರುತ್ತೆ ಅದನ್ನ ಹಾಕಿ ಅಥೆಂತಿಕೆಟ್ ಅಂತ ಕೊಡಿ.
25. ನಂತರ ಈ ಸೈನ್ ಅಂತ ಕ್ಲಿಕ್ ಮಾಡಿ ಅಲ್ಲಿ ekyc ಪೂರ್ಣ ಮಾಡಿ.
26. Ekyc ಮಾಡಿದ ನಂತರ ಅಲ್ಲಿ ಒಂದು ಹೊಸ ಫಾರ್ಮ್ ಓಪನ್ ಆಗುತ್ತೆ.ಅಲ್ಲಿ ಪಾಸ್ವರ್ಡ್ ನಲ್ಲಿ ನಿಮ್ಮ ಹುಟ್ಟಿದ ದಿನಾಂಕ ಹಾಕಿ ನಿಮ್ಮ ಅಪ್ಲಿಕೇಷನ್ ಪ್ರಿಂಟ್ ತೆಗೆದುಕೊಳ್ಳಿ.
27. ಇದಾದ 15 ದಿನಗಳ ನಂತರ ನೀವು ನೀಡಿರುವ ಅಡ್ರೆಸ್ ಗೆ ನಿಮ್ಮ ಪಾನ್ ಕಾರ್ಡ್ ಬರುತ್ತಾರೆ.
ನಿಮಗಾಗಿ:ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಿ.how to apply for voter ID in mobile !