Land surveyor recruitment : ನಮಸ್ಕಾರ ಗೆಳೆಯರೇ ಇದೀಗ ಮತ್ತೊಂದು ಹೊಸ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.ಅದರ ಸಂಪೂರ್ಣ ಮಾಹಿತಿಯನ್ನು ಈ ಒಂದು ವರದಿಯಲ್ಲಿ ನೀಡಲಾಗಿದೆ.ಆದ್ದರಿಂದ ಹುದ್ದೆಗಳನ್ನು ಹುಡುಕುತ್ತಿರುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.ನಿಮ್ಮ ಮೊಬೈಲ್ ಅಲ್ಲಿಯೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಹೌದು ಗೆಳೆಯರೇ ಮೇಲೆ ಹೇಳಿದಂತೆ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ (KPSC) ಒಟ್ಟು 364 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆದ್ದರಿಂದ ನೀವು ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿದ್ದು, ಈ ಹುದ್ದೆಗಳಲ್ಲಿ ಅಸಕ್ತಿ ಇದ್ದರೆ ಕೂಡಲೇ ಅರ್ಜಿ ಸಲ್ಲಿಸಿ.
ಈ ಮೇಲೆ ಹೇಳಿದ ಲ್ಯಾಂಡ್ ಸರ್ವೇಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು, ಬೇಕಾಗುವ ದಾಖಲಾತಿಗಳು,ಅರ್ಜಿಯ ಶುಲ್ಕ ,ವಯಸ್ಸಿನ ಮಿತಿ , ಪ್ರತಿ ತಿಂಗಳ ಸಂಬಳ,ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಹಾಕುವ ವಿಧಾನದ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.ಇದನ್ನು ಸಂಪೂರ್ಣ ನೋಡಿಕೊಂಡು ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ.
Land surveyor recruitment 2024 ರ ವಿವರ :
ಕರ್ನಾಟಕ ಭೂಮಾಪನ ಕಂದಾಯ ಸಂಸ್ಥೆಯ ಭೂಮಾಪನ ಇಲಾಖೆಯಲ್ಲಿ ಒಟ್ಟು 364 ಭೂಮಾಪಕರ ಹುದ್ದೆಗೆ ಅರ್ಜಿಯನ್ನು ಕರೆದಿದೆ.ಅದರಲ್ಲಿ 100 ಹೈದ್ರಾಬಾದ್ ಕರ್ನಾಟಕ ವೃಂದದ ಮತ್ತು 264 ಹುದ್ದೆಗಳು ಉಳಿದ ವೃಂದದಲ್ಲಿ ಭರ್ತಿ ಮಾಡಲಿದೆ.ಆಸಕ್ತರು ಇದರಲ್ಲಿ ನಿಮಗೆ ಅನ್ವಯವಾಗುವ ಹುದ್ದೆಗೆ ಅರ್ಜಿಯನ್ನು ಆನ್ಲೈನ್ ಅಲ್ಲಿ ಸಲ್ಲಿಸಬಹುದು.
ಈ ಹುದ್ದೆಗಳು ಕರ್ನಾಟಕ ಲೋಕ ಸೇವಾ ಆಯೋಗದಲ್ಲಿನ ಭೂಮಾಪನ ಇಲಾಖೆಯ ಹುದ್ದೆಗಳಗಿದ್ದೂ ಕರ್ನಾಟಕ ತುಂಬೆಲ್ಲ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಪ್ರತಿ ತಿಂಗಳ ವೇತನ ಸುಮಾರು 23,500 ರಿಂದ 47,650 ಆಗಿರುತ್ತದೆ.ಅದಲ್ಲದೆ ಪರ್ಮನೆಂಟ್ ಹುದ್ದೆಗಳಾಗಿದ್ದೂ ಆಸಕ್ತಿ ಮತ್ತು ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿರುವವರು ಕೂಡಲೇ ಅರ್ಜಿ ಸಲ್ಲಿಸಿ .
Land surveyor recruitment ಶೈಕ್ಷಣಿಕ ಅರ್ಹತೆಗಳು:
1.ಪಿ.ಯು.ಸಿ ಅಲ್ಲಿ ವಿಜ್ಞಾನ ವಿಷಯವನ್ನು ಪಡೆದು ,ಗಣಿತ ವಿಷಯದಲ್ಲಿ ಶೇಕಡ 60% ಅಂಕಗಳಿಗಿಂತ ಹೆಚ್ಚು ಪಡೆದು ಉತ್ತೀರ್ಣ ಆಗಿರಬೇಕು.
ಅಥವ
2.ಬಿ.ಇ/ಬಿ.ಟೆಕ್/ಸಿವಿಲ್ ಇಂಜಿನಿಯರಿಂಗ್/ಡಿಪ್ಲೊಮ ಅಲ್ಲಿ ಉತ್ತೀರ್ಣರಾಗಿರಬೇಕು.
ಅಥವ
3.ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ನಡೆಸುವ “ಐಟಿಐ ಇನ್ ಸರ್ವೇ ಟ್ರೇಡ್” ಅಲ್ಲಿ ಉತ್ತೀರ್ಣ ಆಗಿರಬೇಕು.
ವಯಸ್ಸಿನ ಮಿತಿ :
•SC/ST/Cat-1 ಫಲಾನುಭವಿಗಳಿಗೆ – 05 ವರ್ಷ
•PwBD ಫಲಾನುಭವಿಗಳಿಗೆ. – 10 ವರ್ಷ
•OBC ಫಲಾನುಭವಿಗಳಿಗೆ. – 03 ವರ್ಷ
ಅರ್ಜಿಯ ಶುಲ್ಕ:
1.ಹಿಂದುಳಿದ ವರ್ಗದ ಫಲಾನುಭವಿಗೆ ಅರ್ಜಿ ಶುಲ್ಕ – 300 ರೂ
2.ಸಾಮಾನ್ಯ ವರ್ಗದ ಫಲಾನುಭವಿಗೆ ಅರ್ಜಿ ಶುಲ್ಕ -600 ರೂ
3. ಮಾಜಿ ಸೈನಿಕ ಫಲಾನುಭವಿಗೆ ಅರ್ಜಿ ಶುಲ್ಕ -50 ರೂ
4.SC/ST ವರ್ಗದ ಫಲಾನುಭವಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ:
•ಈ ಭೂಮಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
•ನಂತರ ಅಲ್ಲಿ ಕೇಳಿರುವ ನಿಮ್ಮ ಹೆಸರು, ಫೋನ್ ನಂಬರ್, ಶೈಕ್ಷಣಿಕ ಅರ್ಹತೆಗಳು ಮತ್ತು ಇನ್ನಿತರ ಮಾಹಿತಿಗಳನ್ನು ಭರ್ತಿ ಮಾಡಿ.
•ಮೇಲೆ ನೀಡಿದ ಮಾಹಿತಿಯನ್ನು ಸರಿಯಾಗಿ ಇನ್ನೊಮ್ಮೆ ನೋಡಿಕೊಳ್ಳಿ.
•ನಂತರ ನಿಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.
•ಕೊನೆಯದಾಗಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ .
ಪ್ರಮುಖ ದಿನಾಂಕಗಳು:
•ಅರ್ಜಿ ಪ್ರಾರಂಭದ ದಿನಾಂಕ -11-03-2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10-04-2024
• ಸ್ಪರ್ಧಾತ್ಮಕ ಪರೀಕ್ಷೆ ಕನ್ನಡ ಭಾಷೆಯ ಪರೀಕ್ಷೆ ದಿನಾಂಕ – 20-07-2024
• ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಪೂರ್ವಿಕ ದಿನಾಂಕ. – 21-07-2024
ಈ ಮಾಹಿತಿ ನಿಮಗೆ ಉಪಯೋಗ ಆದರೆ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ.
ಇದನ್ನು ಓದಿ : ಕೃಷಿ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್|ಶೇಕಡಾ 90% ರಷ್ಟು ಸಬ್ಸಿಡಿ|ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!