ಉಚಿತ ಸ್ಪ್ರಿಂಕ್ಲರ್ ಪೈಪುಗಳು: ರೈತರಿಗೆ ಕೃಷಿ ಇಲಾಖೆಯ ಬಂಪರ್ ಆಫರ್|ಈಗಲೆ ಅರ್ಜಿ ಸಲ್ಲಿಸಿ!

ಕೇಂದ್ರ ಸರ್ಕಾರ  ಮತ್ತು ರಾಜ್ಯ ಸರ್ಕಾರಗಳು ಕೃಷಿ ಇಲಾಖೆ (Agriculture department) ಸಂಯೋಗದಲ್ಲಿ ರೈತರಿಗಾಗಿ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು ಜಾರಗೊಳಿಸಿದೆ.

ಕೃಷಿ ಚಟುವಟಿಕೆ  ಗೋಸ್ಕರ ಅಗತ್ಯವಾಗಿರುವಂತಹ  ವಸ್ತುಗಳಿಗೆ ಮತ್ತು ಕೃಷಿಯ ಚಟುವಟಿಕೆಗಳಿಗೆ ಬೇಕಾಗಿರುವಂತಹ ಸಾಲ ಸೌಲಭ್ಯವನ್ನು (Loan) ಪಡೆದುಕೊಳ್ಳ ಸಲುವಾಗಿ ಕೃಷಿ ಇಲಾಖೆಯ ವತಿಯಿಂದ ರೈತರುಗಳಿಗೆ ಸಬ್ಸಿಡಿ ದರದಲ್ಲಿ ಪೈಪುಗಳ ಅನುಕೂಲ ಮಾಡಿಕೊಡಲಾಗುತ್ತದೆ.

ಸೂಕ್ಷ್ಮ ನೀರಾವರಿ (micro irrigation) ಯೋಜನೆಯ ಅಡಿಯಲ್ಲಿ ರೈತರಿಗೆ ಅನುಕೂಲವಾಗುವ ಅನೇಕ ಪ್ರಮುಖವಾದ ಯೋಜನೆಯನ್ನು ಸರ್ಕಾರವು ಪರಿಚಯಿಸಿ ಕೊಟ್ಟಿದೆ.

 

ಸಬ್ಸಿಡಿ ದರದಲ್ಲಿ ಸ್ಪ್ರಿಂಕ್ಲರ್ ಪೈಪುಗಳು!

 

ಇಂದಿನ ದಿನಗಳಲ್ಲಿ ನೀರಿನ ಅನಾನುಕೂಲತೆಯಿಂದ ರೈತರು ತಮ್ಮ ಬೆಳೆಯನ್ನು ಬೆಳೆಯಲು ಸರಿಯಾಗಿ ಅನುಕೂಲವಾಗುತ್ತಿಲ್ಲ. ಅದ್ದರಿಂದ ಹಿತಮಿತವಾಗಿ  ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಈ ಸ್ಪ್ರಿಂಕ್ಲರ್ ಸೈಟ್ಗಳ ಬಳಕೆ ಅತಿ ಮುಖ್ಯ ಆಗಿದೆ.

 

ಅದಕ್ಕಾಗಿ ತೀರ ಕಡಿಮೆ ನೀರು ಬಳಕೆ ಆಗುವಂತಹ ಮತ್ತು ನೀರು ನಷ್ಟ ಆಗದೆ ಇರುವಂತಹ ವಿಧಾನದಲ್ಲಿ, ರೈತರ ಜಮೀನುಗಳಿಗೆ ನೀರು ಒದಗಿಸುವಂತಹ ಸ್ಪ್ರಿಂಕ್ಲರ್ ಸೆಟ್ ಅನ್ನು ಸರ್ಕಾರ ಸಬ್ಸಿಡಿ ಬೆಲೆಗೆ ರೈತರಿಗೆ ಒದಗಿಸಿ ಕೊಡಲಾಗುತ್ತಿದೆ.

 

ಈ ಸ್ಪ್ರಿಂಕ್ಲರ್ ಸೆಟ್ ಗಳನ್ನ ರೈತರು ಉಪಯೋಗ ಮಾಡುವುದರಿಂದ ನೀರಿನ ಉಳಿತಾಯ ಆಗುವಂತಹದು ಅಷ್ಟೇ ಅಲ್ಲದೆ ಮಣ್ಣಿನ ಸವಕಳಿ ಆಗುವುದನ್ನು ತಡೆಯುತ್ತದೆ. ಮಣ್ಣಿನ ಫಲವತ್ತತೆಯನ್ನು ನಷ್ಟ ಆಗದಂತೆ ತಡೆಯುತ್ತದೆ. ಈ ಒಂದು ಕಾರಣದಿಂದಾಗಿ ಹಳೆಯ ಸಾಂಪ್ರದಾಯಿಕ ನೀರಾವರಿ ಪದ್ಧತಿಗಿಂತಲೂ ಕೂಡ ಸ್ಪ್ರಿಂಕ್ಲರ್ ಅಳವಡಿಸುವುದು ಬಹಳ ಉತ್ತಮ ನೀರಾವರಿ ಪದ್ಧತಿಯಾಗಿದೆ.

 

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು!

•ಆಧಾರ್ ಕಾರ್ಡ್

•ಬ್ಯಾಂಕ್ ಖಾತೆ

•ಹೊಲದ ಪಹಣಿ

•ನೀರು ಬಳಕೆ ಪ್ರಮಾಣ ಪತ್ರ

•ಪಿಂಚಣಿ

•20 ರೂಪಾಯಿ ಸ್ಟ್ಯಾಂಪ್

ಇದನ್ನು ಓದಿ:Post office recruitment 2024|51,485 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ|10ನೇ ಪಾಸಾದಾವರು ಈಗಲೆ ಅರ್ಜಿ ಸಲ್ಲಿಸಿ!

ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ  ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಿ ಸ್ವಲ್ಪ ದಿನಗಳಾದ ಮೇಲೆ ಕೇಂದ್ರದವರು ನಿಮ್ಮ ಅರ್ಜಿಯ ಸ್ಥಿತಿಯನ್ನು ಫೋನ್ ಮಾಡುವುದರ ಮೂಲಕ ತಿಳಿಸುತ್ತಾರೆ.

 

ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹತ್ತಿರದ ರೈತ ಸಂಪರ್ಕದ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಲು ಸಂಬಂಧಪಟ್ಟಂತಹ ದಾಖಲೆಗಳನ್ನು ನೀಡಿ ನೇರವಾಗಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಹಾಗೂ ನಿಮ್ಮ ಮೊಬೈಲ್ ಮೂಲಕವು ಕೂಡ ನೀವು ಹಣವನ್ನು ಪಾವತಿ ಮಾಡುವುದರ ಮೂಲಕ ಸ್ಪ್ರಿಂಕ್ಲರ್ ಸೆಟ್ ಪಡೆದುಕೊಳ್ಳಬಹುದಾಗಿದೆ.

 

ನೀವು ನಿಮ್ಮ ಮೊಬೈಲ್ ನಲ್ಲಿ ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಬೇಟಿ ನೀಡಿ ಸಣ್ಣ ನೀರಾವರಿ ಅರ್ಜಿ ನೋಂದಣಿ ಎನ್ನುವಂತಹ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ. ಈಗ ರೈತರು FID ಸಂಖ್ಯೆಯನ್ನು ನಮೂದಿಸಿ ಎಂಟರ್ ಮಾಡಿ.

 

ನಿಮ್ಮಯ ಮೊಬೈಲ್ ನ ಸಂಖ್ಯೆಗೆ ಓಟಿಪಿಯು ಬರುತ್ತದೆ ಅದನ್ನು ನಮೂದಿಸಿದರೆ ನಿಮ್ಮ ಅರ್ಜಿ ಸಲ್ಲಿಕೆ ಮುಗಿಯುತ್ತದೆ. ನಂತರ ನಿಮ್ಮ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಮತ್ತು ಆನ್ಲೈನ್ ಪೇಮೆಂಟ್ ಮಾಡಬೇಕು.

 

ಅರ್ಜಿ ಸಲ್ಲಿಕೆಯು ಮುಗಿದ ನಂತರ ಈ – ರಶೀದಿಯನ್ನು ಪಡೆದುಕೊಂಡು ಹತ್ತಿರದಲ್ಲಿರುವ ಕೃಷಿ ಸೇವಾ ಕೇಂದ್ರಕ್ಕೆ ರಶೀದಿಯನ್ನು ತೋರಿಸಿದರೆ ನಿಮಗೆ ಸ್ಪ್ರಿಂಕ್ಲರ್ ಸೆಟ್ ನೀಡಲಾಗುತ್ತದೆ.

 

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ.

CLICK HERE 

 

ಯಾವ ಬೆಲೆಗೆ ಸಿಗಲಿದೆ ಸ್ಪ್ರಿಂಕ್ಲರ್ ಸೆಟ್

•18 ಪೈಪ್ಗಳು ಮತ್ತು 2 ಜೆಟ್ – 2496 (ಒಂದು ಎಕರೆ ಜಮೀನಿಗೆ)

•30 ಪೈಪ್ಗಳು ಮತ್ತು ಜೆಟ್ಗಳು 5 – 4700 (1 – 2.5 ಎಕರೆಗೆ )

Sprinkler pipe subsidi

ಈ ಸಬ್ಸಿಡಿ ಯೋಜನೆಯ ಮೂಲಕ ಸ್ಪ್ರಿಂಕ್ಲಾರ್ ಸೆಟ್ ತೆಗೆದುಕೊಳ್ಳಬೇಕು ಎನ್ನುವವರು ಪೇಮೆಂಟ್ ಮಾಡುವಾಗ ಈ ಮೇಲೆ ಸೂಚಿಸಿದ ಒಂದು ಹಣವನ್ನು ನೀವು ಚಲನ್ ಮೂಲಕ ಅರ್ಜಿದಾರರ ಬ್ಯಾಂಕ್ ನಲ್ಲಿ ತುಂಬ ಬೇಕಾಗುತ್ತದೆ.ಪೇಮೆಂಟ್ ರಶೀದಿಯನ್ನು ಯಾವುದೆ ಕಾರಣಕ್ಕೂ ಕಳೆದುಕೊಳ್ಳಬೇಡಿ. ಅದನ್ನು ತೆಗೆದುಕೊಂಡು ಹೋಗಿ ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಕೊಡಿ. ಇದಾದ ನಂತರ ವರ್ಕ್ ಆರ್ಡರ್ ಮಾಡಿ. ಪೈಪ್ಗೆ ಬಡ್ಜೆಟ್ ಬಂದ ನಂತರ ಅವರು ನಿಮಗೆ ಪೈಪ್ ನೀಡುತ್ತಾರೆ.

ಉದ್ಯೋಗ ಮಾಹಿತಿ:10ನೇ & 12ನೇ ಪಾಸದಾವರಿಗೆ ಉದ್ಯೋಗಾವಕಾಶಗಳು|40,000 ವೇತನ|ಈಗಲೆ ಅರ್ಜಿ ಸಲ್ಲಿಸಿ!

ಈ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇನೆ.ಹಾಗಿದ್ದರೆ ಪ್ರತಿ ದಿನ ಈ ರೀತಿ ಮಾಹಿತಿಗಳಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ.ನಿಮ್ಮ ಸ್ನೇಹಿತರಿಗೆ ಮತ್ತು ಸಂಭಂದಿಕರಿಗು ಶೇರ್ ಮಾಡಿ.

Leave a Comment