State scholarship portal: ಪ್ರೀತಿಯ ಓದುತ್ತಿರುವ ವಿದ್ಯಾರ್ಥಿಗಳಿಗೆ ನಮಸ್ಕಾರಗಳು. ಈ ಒಂದು ಲೇಖನದ ಮುಖಾಂತರ ಕರ್ನಾಟಕದ ವಿದ್ಯಾರ್ಥಿಗಳಿಗೆ ತಿಳಿಸುವುದು ಏನೆಂದರೆ ರಾಜ್ಯ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನು ದಿನಾಂಕ ಇದ್ದು ಅರ್ಹ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಿ. ಇದರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಹೌದು ಸ್ನೇಹಿತರೆ ಮೇಲೆ ಹೇಳಿದಂತೆ ರಾಜ್ಯ ವಿದ್ಯಾರ್ಥಿ ವೇತನ 2024ಕ್ಕೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದ್ದು ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ . ರಾಜ್ಯ ವಿಧ್ಯಾರ್ಥಿ ವೇತನದಲ್ಲಿ ಯಾವ್ಯಾವ ಸ್ಕಾಲರ್ಶಿಪ್ ಬರುತ್ತವೆ ಎಂಬುದನ್ನು ತಿಳಿಸಿದ್ದೇವೆ.
ಈ ರಾಜ್ಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಬೇಕಾಗುವ ದಾಖಲಾತಿಗಳು ಅರ್ಜಿ ಹಾಕಲು ಕೊನೆಯ ದಿನಾಂಕ ಮತ್ತು ಅರ್ಜಿ ಹಾಕುವ ವಿಧಾನವನ್ನು ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
10ನೇ ತರಗತಿ ಪಾಸಾದ ನಂತರ ಪೋಸ್ಟ್ ಮೆಟ್ರಿಕ್ ಅಲ್ಲಿ ಓದುತ್ತಿರುವವರು, ಪದವಿ, ಇನ್ನಿತರೇ ಉನ್ನತ ಪದವಿಯ ಮತ್ತು ಡಿಪ್ಲೊಮಾ ಇನ್ನಿತರ ಹಲವು ಕೋರ್ಸ್ ಗಳಿಗೆ ರಾಜ್ಯ ಸರ್ಕಾರವು ವಿಧ್ಯಾರ್ಥಿ ವೇತನ ನೀಡುತ್ತದೆ.
ಇದನ್ನು ಓದಿ:10ನೇ ತರಗತಿ ಪಾಸಾದವರಿಗೆ 10 ಸಾವಿರ ವಿದ್ಯಾರ್ಥಿ ವೇತನ.tata capital scholarship.apply now.
ಅರ್ಜಿ ಸಲ್ಲಿಸಲು ಯಾವ ದಾಖಲಾತಿಗಳು ಬೇಕು?
1. ವಿಧ್ಯಾರ್ಥಿಯ ಫೋನ್ ನಂಬರ್ ಮತ್ತು ಇಮೇಲ್ ಐಡಿ
2. ಹಿಂದಿನ ಎಸ್. ಎಸ್. ಎಲ್. ಸಿ ಮಾರ್ಕ್ಸ್ ಕಾರ್ಡ್
3. ಆಧಾರ್ ಕಾರ್ಡ್
4. ಕಾಲೇಜ್ ರಿಸಿಪ್ಟ್
5. ಸ್ಟಡಿ ಸರ್ಟಿಫಿಕೇಟ್
6. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
7. ಹಾಸ್ಟೆಲ್ ವಿವರಗಳು
ಈ ಮೇಲೆ ನೀಡಿರುವ ದಾಖಲೆಗಳನ್ನು ಸರಿಯಾಗಿ ಗಮನಿಸಿ ಮತ್ತು ಖಚಿತ ಪಡಿಸಿಕೊಂಡು ಕೆಳಗೆ ನೀಡಿರುವ SSP ಅಧಿಕೃತ ಲಿಂಕ್ ಮೂಲಕ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ವಿಧಾನ:
1. ಕೆಳಗೆ ನೀಡಿರುವ ರಾಜ್ಯ ವಿದ್ಯಾರ್ಥಿವೇತನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
2. ನಂತರ ಹೊಸದಾಗಿ ಅರ್ಜಿ ಹಾಕುತ್ತಿದ್ದರೆ ನಿಮ್ಮ ಖಾತೆಯನ್ನು ರೆಜಿಸ್ಟರ್ ಮಾಡಿಕೊಳ್ಳಿ.
3. ನಂತರ ರಿಜಿಸ್ಟರ್ ನಂಬರ್ ಹಾಕಿ ಲಾಗಿನ್ ಆಗಿ
4. ನಂತರ ಅಲ್ಲಿ ನಿಮ್ಮ ಹೆಸರು,sslc ನೋಂದಣಿ ಸಂಖ್ಯೆ , ಕಾಲೇಜಿನ ಸಂಖ್ಯೆ, ಜಾತಿ ಮತ್ತು ಆದ ಪ್ರಮಾಣ ಪತ್ರ ಸಂಖ್ಯೆ , ಇನ್ನಿತರ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ.
ಕೆಳಗೆ ನೀಡಿರುವ ರಾಜ್ಯ ವಿದ್ಯಾರ್ಥಿ ವೇತನದ ಅಧಿಕೃತ ಲಿಂಕ್ ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಅರ್ಜಿ ಸಲ್ಲಿಸುವಲ್ಲಿ ನಿಮಗೆ ಏನಾದರೂ ತೊಂದರೆ ಆದರೆ ಆನ್ಲೈನ್ ಸೆಂಟರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಿ ಆನ್ ಲೈನ್ ಸೆಂಟರ್ ಹೋಗುವಾಗ ಈ ಮೇಲಿನ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
ನಿಮಗಾಗಿ ಓದಿ:BMTC ಯಲ್ಲಿ 2000 ಖಾಲಿ ಹುದ್ದೆಗಳ ನೇಮಕಾತಿ|10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ|BMTC recruitment 2024.
ರಾಜ್ಯ ವಿದ್ಯಾರ್ಥಿ ವೇತನ ಅಧಿಕೃತ ಲಿಂಕ್:
ನೀವೇನಾದ್ರೂ ಪೋಸ್ಟ್ ಮೆಟ್ರಿಕ್ ಅಥವಾ ಇನ್ನಿತರ ಉನ್ನತ ವಿದ್ಯಾಭ್ಯಾಸ ಓದುತ್ತಿದ್ದರೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ವಿದ್ಯಾರ್ಥಿವೇತನಕ್ಕೆ(ssp ) ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
Ssp ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಇಷ್ಟವಾದಲ್ಲಿ ಪ್ರತಿದಿನ ಇದೇ ರೀತಿಯ ಸ್ಕಾಲರ್ಶಿಪ್ ಜಾಬ್ಸ್ ಮತ್ತು ಪ್ರಚಲಿತ ಘಟನೆಯ ಬಗ್ಗೆ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವೆಬ್ಸೈಟ್ ಅನ್ನು subscribe ಮಾಡಿಕೊಳ್ಳಿ ಮತ್ತು ಈ ಮಾಹಿತಿ ಉಪಯೋಗವಾಗುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.