voter ID in mobile: ನಮಸ್ಕಾರ ಗೆಳೆಯರೆ ಈ ಒಂದು ಲೇಖನದಲ್ಲಿ ನಾನು, ನಿಮಗೆ ನೀವೂ ನಿಮ್ಮ ಮೋಬೈಲ್ ನಲ್ಲಿಯೇ ವೋಟರ್ ಐಡಿ ಗೆ ಹೇಗೆ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಮತ್ತು ಅರ್ಜಿ ಸಲ್ಲಿಸಲು ಪಾಲಿಸಬೇಕಾದ ಹಂತಗಳು ಇನ್ನಿತರೇ ಪ್ರಮುಖ ಮಾಹಿತಿಯನ್ನು ನೀಡುತ್ತಿದ್ದೇನೆ.
ಹೌದು ಗೆಳೆಯರೇ ಈಗಗಲೇ ಲೋಕ ಸಭಾ ಚುನಾವಣೆಯ ವಿಷಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜನರು ವೋಟರ್ ಐಡಿ ಗಳನ್ನು ತಿದ್ದುಪಡಿ ಮಾಡುವುದು ಮತ್ತು ಹೊಸ ವೋಟರ್ ಐಡಿ ಗಳಿಗೆ ಅರ್ಜಿ ಸಲ್ಲಿಸುವುದು ಪ್ರಾರಂಭ ಆಗಿದೆ. ಆದರಿಂದ ನೀವೂ ಕೂಡ ಯಾವುದಾದರೂ ವೋಟರ್ ಐಡಿ ಗಳನ್ನು ತಿದ್ದುಪಡಿ ಮಾಡುವುದು ಅಥವಾ ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸ ಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣ ಓದಿರಿ.
voter ID in mobile:
ವೋಟಿಂಗ್ ಮಾಡುವುದು ಪ್ರತಿ ಭಾರತೀಯನ ಹಕ್ಕಾಗಿದೆ.18 ವರ್ಷ ಮೇಲ್ಪಟ್ಟ ಎಲ್ಲಾ ಯುವಕ ಮತ್ತು ಯುವತಿಯರು ವೋಟರ್ ಐಡಿ ಯನ್ನು ಮಾಡಿಸಿಕೊಳ್ಳಬೇಕು. ನಿಮಗೆ ಬೇಕಾದ ದೇಶದ ಭವಿಷ್ಯವನ್ನು ರೂಪಿಸುವ ಅಭ್ಯರ್ಥಿಯನ್ನು ಹಾರಿಸಿ ತರಬೇಕು. ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಕೆಳಗೆ ನೀಡಲಾಗಿದೆ.
voter ID in mobile ಗೆ ಬೇಕಾಗುವ ದಾಖಲೆಗಳು:
1. ಫೋನ್ ನಂಬರ್ ಮತ್ತು ಇಮೇಲ್ ಐಡಿ
2. ಆಧಾರ್ ಕಾರ್ಡ್
3. ಹುಟ್ಟಿದ ದಿನಾಂಕ
4. ನಿಮ್ಮ ಮನೆಯಲ್ಲಿಯವರ ಯಾರದಾದರೂ ಒಂದು ವೋಟರ್ ಐಡಿ (for reference)
ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.
voter ID in mobile ನ ಅಧಿಕೃತ ವೆಬ್ ಸೈಟ್:
ಈ ಮೇಲೆ ನೀಡಿರುವ ದಾಖಲೆಗಳಿಂದ ಇಲ್ಲಿ ನೀಡಿರುವ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವೋಟರ್ ಐಡಿಯನ್ನೂ ಮೋಬೈಲ್ ಅಲ್ಲಿಯೇ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಪಾಲಿಸಬೇಕಾದ ಪ್ರತಿ ಹಂತಗಳು ಇಲ್ಲಿ ನೀಡಲಾಗಿದೆ.
ಇದನ್ನು ಓದಿ:10ನೇ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗಾವಕಾಶಗಳು|forest gaurd recruitment karnataka.
voter ID in mobile ನಲ್ಲಿ ಅರ್ಜಿ ಹಾಕುವ ವಿಧಾನ:
ರೆಜಿಸ್ಟರ್ ಹಾಗುವುದು:
1. ಮೊದಲು ಕೆಳಗೆ ನೀಡಿರುವ ವೋಟರ್ಸ್ ನ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.
2. ನಂತರ ಅಲ್ಲಿ ಫೀಲ್ ಫಾರಂ 6 ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
3. ನಂತರ ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಹಾಕಿ ಎಂಟರ ಮಾಡಿ.
4. ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಹೆಸರು ಮತ್ತು ಪಾಸ್ವರ್ಡ್ ಹಾಕಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
5. ನಂತರ ಬಂದ ಒಟಿಪಿಯನ್ನು ಹಾಕಿ ರೆಜಿಸ್ಟರ್ ಹಾಗಿ.
ಅಪ್ಲಿಕೇಷನ್ ಹಾಕುವುದು:
1. ರೆಜಿಸ್ಟರ್ ಆದ ನಂತರ ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ಲಾಗಿನ್ ಆಗಿ.
2. ಆದ ನಂತರ ಅಲ್ಲಿ ಫಾರ್ಮ್ 6 ಮೇಲೆ ಕ್ಲಿಕ್ ಮಾಡಿ. ಫಾರ್ಮ್ ಓಪನ್ ಆಗುತ್ತದೆ.
3. ಅಲ್ಲಿ ಮೊದಲು ನಿಮ್ಮ ರಾಜ್ಯ ಮತ್ತು ಚುನಾವಣೆ ಕ್ಷೇತ್ರಗಳನ್ನು ಸೆಲೆಕ್ಟ್ ಮಾಡಿ.next ಅಂತ ಕೊಡಿ.
4. ನಂತರ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನು ಭರ್ತಿ ಮಾಡಿ.
5. Choose file ಮೇಲೆ ಕ್ಲಿಕ್ ಮಾಡಿ ನಿಮ್ಮ ಪಾಸ್ಪೋರ್ಟ್ ಅಳತೆ ಫೋಟೋವನ್ನು ಅಪ್ಲೋಡ್ ಮಾಡಿ.next ಅಂತ ಒತ್ತಿ.
6. ನಂತರ ನಿಮ್ಮ ಮನೆಯವರ ಯಾರದಾದರೂ ಒಬ್ಬರ ವೋಟರ್ ಡೀಟೇಲ್ಸ್ ಅನ್ನ ರೆಫರೆನ್ಸ್ ಸಲುವಾಗಿ ಕೊಡಬೇಕಾಗುತ್ತದೆ. ನಂತರ next ಮೇಲೆ ಕ್ಲಿಕ್ ಮಾಡಿ.
7. ಇದಾದ ನಂತರ ಕಾಂಟಾಕ್ಟ್ ಡೀಟೇಲ್ಸ್ ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಹಾಕಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
8. ಬಂದ ಓಟಿಪಿಯನ್ನು ಎಂಟ್ರಿ ಮಾಡಿ ವೇರಿಫೈ ಮಾಡಿ.
9. ನಂತರ ಇಮೇಲ್ ಐಡಿಯನ್ನು ಹಾಕಿ ನೆಕ್ಸ್ಟ್ ಅಂತ ಕೊಡಿ.
10. ನಂತರ ನಿಮ್ಮ ಆಧಾರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಹಾಕಿ ನೆಕ್ಸ್ಟ್ ಅಂತ ಕೊಡಿ
11. ಇದಾದ ಮೇಲೆ ಹುಟ್ಟಿದ ದಿನಾಂಕದ ಪ್ರಮಾಣಕ್ಕಾಗಿ ನಿಮ್ಮ ಯಾವುದಾದರೂ ಒಂದು ದಾಖಲೆಯನ್ನು ಅಪ್ಲೋಡ್ ಮಾಡಿ.next ಅಂತ ಕೊಡಿ.
12. ನಂತರ ನಿಮ್ಮ ಆಧಾರ್ ನಲ್ಲಿರುವ ಅಡ್ರೆಸ್ ಅನ್ನು ಭರ್ತಿ ಮಾಡಿ. ಅದರ ಫೋಟೋವನ್ನು ಅಪ್ಲೋಡ್ ಮಾಡಿ.
13. ನಂತರ ಪ್ರೀವಿಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
14. ಎಲ್ಲ ಮಾಹಿತಿಗಳು ಸರಿಯಾಗಿದ್ದರೆ ಕೊನೆಯದಾಗಿ ನೀಡಿರುವ ಕ್ಯಾಪ್ಚವನ್ನು ಭರ್ತಿ ಮಾಡಿ ಸಬ್ಮಿಟ್ ಅಂತ ಕೊಡಿ.
ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಇದಾದ ನಂತರ ನಿಮ್ಮ ಈ ಅಪ್ಲಿಕೇಶನ್ ಚುನಾವಣಾ ಆಯೋಗಕ್ಕೆ ತಲುಪುತ್ತದೆ, 15 ದಿನಗಳು ಅಥವಾ 1 ತಿಂಗಳಿನಲ್ಲಿ ನಿಮ್ಮ ವೋಟರ್ ಐಡಿ ಮನೆಗೆ ಬಂದು ತಲುಪುತ್ತದೆ. ಇದಿಷ್ಟು ನಿಮ್ಮ ಮೊಬೈಲ್ ನಲ್ಲಿ ಹೊಸ ವೋಟರ್ ಐಡಿ ಗೆ ಅರ್ಜಿ ಹಾಕುವುದರ ಸಂಪೂರ್ಣ ಮಾಹಿತಿಯಾಗಿದೆ.
ಇದನ್ನು ಸಹ ಓದಿ:PUC ಪಾಸಾದವರಿಗೆ 30,000 ಪ್ರೋತ್ಸಾಹ ಧನ|prize money scholarship 2024|ಈಗಲೇ ಅರ್ಜಿ ಸಲ್ಲಿಸಿ.
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಮತ್ತು ಇದೇ ರೀತಿಯ ಸುದ್ದಿಗಳಿಗಾಗಿ ಪ್ರತಿದಿನ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ.