ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈ ಕೂಡಲೇ ಅರ್ಜಿ ಸಲ್ಲಿಸಿ..

WCD Bidar Recruitment 2024

WCD Bidar Recruitment 2024 :  ನಮಸ್ಕಾರ ಸ್ನೇಹಿತರೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಿಷನ್ ಶಕ್ತಿ ಯೋಜನೆ ಅಡಿಯಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿ ಹಾಕಲು ಸರಕಾರ ಅವಕಾಶ ನೀಡಿದೆ. ಇದರಲ್ಲಿ ಖಾಲಿ ಇರುವ ಜಿಲ್ಲ ಕಾರ್ಯಕ್ರಮ ಸಹಾಯಕರು ಮತ್ತು ಹಣಕಾಸು ಸಾಕ್ಷರತಾ ಪರಿಣಿತರು ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ವಿವರ, ನಿಗದಿತ ದಿನಾಂಕ, ವಿದ್ಯಾರ್ಹತೆ,  ಅರ್ಜಿ ಸಲ್ಲಿಸುವ ಬಗೆ ಎಲ್ಲ ಮಾಹಿತಿಯನ್ನು ನನ್ನ ಲೇಖನದಲ್ಲಿ ಒಂದೊಂದಾಗಿ ವಿವರಣೆ ನೀಡಲಾಗಿದೆ ಈ ಲೇಖನವನ್ನು ಕೊನೆಯವರೆಗೂ ನೋಡಿ ನೀವು ಕೂಡ ಅರ್ಜಿಯನ್ನು ಸಲ್ಲಿಸಿ.

WCD Bidar Recruitment 2024

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ ಮತ್ತು ಕೆಲವು ಶರತ್ತುಗಳನ್ನು ಪೂರೈಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು 05/ 03/ 2024 ರಂದು ಕೊನೆಯ ದಿನಾಂಕವಾಗಿದೆ ಈ ಉದ್ದೆಯನ್ನು ಹಾಕಲು ಬಯಸುವ ಅಭ್ಯರ್ಥಿಗಳು ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್(speed post ) / ರೆಜಿಸ್ಟರ್ ಪೋಸ್ಟ್ ( Register post ) ಮೂಲಕ ಅರ್ಜಿಯನ್ನು ಈ ಕೂಡಲೇ ಸಲ್ಲಿಸಬಹುದು.ಈ ನೇಮಕಾತಿಯ ಪೂರ್ತಿ ವಿವರಣೆಯನ್ನು ಇಲ್ಲಿ ತಿಳಿಯಿರಿ.

ಇದನ್ನೂ ಒಮ್ಮೆ ಓದಿ :

10ನೇ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗಾವಕಾಶಗಳು|forest gaurd recruitment 2024..

WCD Bidar Recruitment 2024

ಮಹಿಳಾ ಮತ್ತು ಮಕ್ಕಳ ರಕ್ಷಣೆ ಅಭಿವೃದ್ಧಿ ಇಲಾಖೆ ಬೀದರ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ಅನುಭವ, ವಯೋಮಿತಿ, ಅರ್ಜಿಯ ಶುಲ್ಕ, ಆಯ್ಕೆ ವಿಧಾನ ಹೇಗೆ ಮಾಡಬೇಕು ಎಂದು ಈ ಲೇಖನದಲ್ಲಿ ಕೆಳಗೆ ಬಿಡಿ ಬಿಡಿಯಾಗಿ ತಿಳಿಸಿಕೊಟ್ಟಿರುತ್ತೇನೆ.

ಹುದ್ದೆಯ ವಿವರ

ಜಿಲ್ಲಾ ಕಾರ್ಯಕ್ರಮ ಸಹಾಯಕರು : ಹುದ್ದೆಯ ಸಂಖ್ಯೆ – 01

ಹಣಕಾಸು ಸಾಕ್ಷರತಾ ಮತ್ತು ಅಕೌಂಟೆಂಟ್ : ಉದ್ದೆಯ ಸಂಖ್ಯೆ- 01

ಒಟ್ಟು ಹುದ್ದೆಗಳ ಸಂಖ್ಯೆ : 02

ವೇತನ ಶ್ರೇಣಿ.

ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಕ್ಷಾರ ಇಲಾಖೆ, ಬೀದರ್ ಜಿಲ್ಲೆಯ ವತಿಯಿಂದ ನಿಗದಿಪಡಿಸಿದ ಮಾಸಿಕ ಕ್ರೂಢಿಕೃತ ವೇತನವನ್ನು ನೀಡಲಾಗುತ್ತದೆ

ಶೈಕ್ಷಣಿಕ ಅರ್ಹತೆ

ಈ ನೇಮಕಾತಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನೀಡಿರುವ ಕೊನೆಯ ದಿನಾಂಕದೊಳಗೆ ಹಾಗೂ ಮಾನ್ಯತೆ ಪಡೆದಿರುವ ಬೋರ್ಡ್/ ವಿಶ್ವ ವಿದ್ಯಾಲಯದಿಂದ ಯಾವುದು ವಿಷಯದಲ್ಲಿ ಮುಗಿಸಿರಬೇಕು ಅಂತಹ ಅಭ್ಯರ್ಥಿಗಳು ಇದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಶುಲ್ಕ.

ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಯಾವುದೇ ತರಹದ ಶುಲ್ಕ ಇರುವುದಿಲ್ಲ.

ವಯೋಮಿತಿ (age limit)

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ದೊಳಗಾಗಿ ಮತ್ತು ಕನಿಷ್ಠ 18 ವರ್ಷದಿಂದ 45 ವರ್ಷ ಒಳಗಾಗಿರಬೇಕು. ಹಾಗಿದ್ದರೆ ಅರ್ಜಿ ಸಲ್ಲಿಸಲು ಬರುತ್ತದೆ.

ಗರಿಷ್ಠ ವಯೋಮಿತಿಯಲ್ಲಿ ಸಡಲಿಕೆ

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ  (SC. ST ) ದವರಿಗೆ 5 ವರ್ಷ

ಇತರೆ ಹಿಂದುಳಿದ ವರ್ಗದವರಿಗೆ (OBC) 3 ವರ್ಷ ಸಡಲಿಕೆ

ಅಂಗವಿಕಲ (PWD) ಅವರ ಕೆಟಗೇರಿಯಲ್ಲಿ 10 ವರ್ಷ ಸಡಲಿಕೆ ಮಾಡಲಾಗಿದೆ.

ಅರ್ಜಿ ಹಾಕುವ ವಿಧಾನ.

ಅಜ್ಜಿ ಹಾಕಲು ಆಸಕ್ತಿ ಮತ್ತು ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿಮ್ಮ ಇತ್ತೀಚಿನ ಫೋಟೋ, ಅದಕ್ಕೆ ಬೇಕಾಗಿರುವ ಅಗತ್ಯವಿದ್ಯಾರ್ಹತೆ, ಮತ್ತು ಅನುಭವ ಹಾಗೂ ಇನ್ನಿತರ
ಅಗತ್ಯ ದಾಖಲೆಗಳನ್ನು ಲಗತ್ತಿಸಿ ದ್ವಿಪ್ರತಿಯಲ್ಲಿ ದಿನಾಂಕ: 05/03/2024 ರ ಒಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿಳಾಸಕ್ಕೆ ಹೋಗಿ  ಅರ್ಜಿ ಸಲ್ಲಿಸುವುದು.

ಪ್ರಮುಖ ದಿನಾಂಕಗಳು.

ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ : 09/02/2024.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
05/03/2024.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

https://www.karnatakacareers.in/organization/women-child-development/

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಅವರಿಗೂ ಸಹ ಅರ್ಜಿ ಹಾಕುವುದರ ಜಾಗೃತಿಯನ್ನು ಮೂಡಿಸಿ…

ಇದನ್ನೂ ಒಮ್ಮೆ ಓದಿ :

ಸಿಹಿ ಸುದ್ದಿ ! ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ವಿತರಣೆ / ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment