new ration card application start today|ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ.. ಎರಡು ದಿನ ಮಾತ್ರ ?

ನಮಸ್ಕಾರ ಸ್ನೇಹಿತರೆ ಈ ಲೇಖನಿ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಕರ್ನಾಟಕ ಸರಕಾರವು (new ration card application start today) ಹೊಸ ರೇಷನ್ ( BPL & APL ) ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕೆಂದರೆ ಈ ಲೇಖನೆಯನ್ನು ಕೊನೆಯ ತನಕ ಓದಿ

ಹೊಸ ರೇಷನ್ ( BPL & APL ) ಕಾರ್ಡಿಗೆ ಅರ್ಜಿ ಹಾಕಲು ತುಂಬಾ ಜನರು ಕಾಯುತ್ತಿದ್ದಾರೆ ಅಂತವರಿಗೆ ಸರಕಾರ ಕಡೆಯಿಂದ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಸರಕಾರ ಈಗಾಗಲೇ ಸುಮಾರು ಸಲ ಅವಕಾಶ ಕಲ್ಪಿಸಿದರು ಜನರಿಗೆ ಸರ್ವ ಸಮಸ್ಯೆಯಿಂದ ರೇಷನ್ ಕಾರ್ಡ್ ಅರ್ಜಿ ಹಾಕಲು ಸಾಧ್ಯವಾಗಿಲ್ಲ ಆದ್ದರಿಂದ ಮತ್ತೆ ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಎರಡು ದಿನ ಕಾಲಾವಕಾಶ ನೀಡಿದೆ.

ಹೊಸ ರೇಷನ್ ಕಾರ್ಡು ( BPL & APL ) ತಿದ್ದುಪಡಿಗೂ ತುಂಬಾ ಜನರು ಕಾಯುತ್ತಿದ್ದಾರೆ. ಏನಪ್ಪಾ ಅಂದರೆ ಈಗಿರುವಂತ ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಹಾಗೂ ಹೆಸರು ಬದಲಾವಣೆ ಮತ್ತು ವಾಸ ಮಾಡುವ ಸ್ಥಳದ ಬದಲಾವಣೆ ಅಥವಾ ಅಡ್ರೆಸ್ ಬದಲಾವಣೆಗೆ ತುಂಬಾ ಜನರು ಕಾಯ್ತಾ ಇದ್ದರು ಅಂತವರಿಗೂ ಕೂಡ ಸರಕಾರ ಕಡೆಯಿಂದ ಗುಡ್ ನ್ಯೂಸ್ ಅಂತಾನೆ ಹೇಳಬಹುದು ಯಾಕೆಂದರೆ ಈ ಸರಕಾರ ಎರಡು ದಿನಗಳ ಕಾಲ ತಿದ್ದುಪಡೆಗೆ ಮತ್ತು ಸದಸ್ಯರ ಸೇರ್ಪಡೆಗೆ ಹಾಗೂ ಅಡ್ರೆಸ್ ಬದಲಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದೆ

ಹೊಸ ರೇಷನ್ ಕಾರ್ಡಿಗೆ ( new ration card application start today) ಅರ್ಜಿ ಹಾಕಲು ದಿನಾಂಕ

ಹೊಸ ರೇಷನ್ ( BPL & APL ) ಕಾರ್ಡಿಗೆ ಅರ್ಜಿ ಹಾಕಲು ಕರ್ನಾಟಕ ಸರಕಾರ ಇದೇ 09/03/2024 ರಿಂದ 10/03/2024 ತನಕ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಕಲ್ಪಿಸಿದ್ದು ಸಮಯ ಬೆಳಗ್ಗೆ 9 (AM) ಗಂಟೆಯಿಂದ ಮಧ್ಯಾಹ್ನ 12 (PM) ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ರೇಷನ್ ತಿದ್ದುಪಡಿಗೆ ದಿನಾಂಕ ಯಾವಾಗ 

ರೇಷನ್ ಕಾರ್ಡ್ ( BPL & APL ) ತಿದ್ದುಪಡೆಗೆ ಈಗಾಗಲೇ ಸುಮಾರು ಸಲ ಅವಕಾಶ ಕಲ್ಪಿಸಿದರು ಸರ್ವರ್ ಸಮಸ್ಯೆಯಿಂದ ಯಾವುದೇ ಒಂದು ರೇಷನ್ ಕಾರ್ಡ್ ತಿದ್ದುಪಡಿ ಆಗಿಲ್ಲ ಅಂತವರಿಗೆ ಸರಕಾರ ಕಡೆಯಿಂದ ಗುಡ್ ನ್ಯೂಸ್ ಎಂದು ಹೇಳಬಹುದು

ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ 9 – 03 – 2024 ರಿಂದ 10 – 03 – 2024 ರ ತನಕ ಕರ್ನಾಟಕ ಸರಕಾರ ಕಡೆಯಿಂದ ಅವಕಾಶ ಕಲ್ಪಿಸಲಾಗಿದೆ.

ರೇಷನ್ ಕಾರ್ಡಿಗೆ ತಿದ್ದುಪಡಿಗೆ ಸಮಯ 12 (PM) ನಿಂದ ಸಂಜೆ 4 (PM) ನ ವರೆಗೆ ಅವಕಾಶ ಮಾಡಿಕೊಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನೇನು ಮಾಡಬಹುದು

  • ಈಗ ನಿಮ್ಮಲ್ಲಿರುವಂಥ ರೇಷನ್ ಕಾರ್ಡ್ ನಲ್ಲಿ ಬೇರೆ ಸದಸ್ಯರು ಅಂದರೆ ನಿಮ್ಮ ಮಕ್ಕಳು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಲು ಅವಕಾಶವಿದೆ
  • ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ಹೆಸರನ್ನು ಸರಿಪಡಿಸಲು ಅವಕಾಶವಿದೆ
  • ನಿಮ್ಮಲ್ಲಿರುವಂತ ರೇಷನ್ ಕಾರ್ಡ್ ನ ಅಡ್ರೆಸ್ ಚೇಂಜ್ ಮಾಡುವ ಅವಕಾಶವಿದೆ. ಉದಾಹರಣೆ ನಿಮ್ಮ ಊರು ಗುಲ್ಬರ್ಗ ಅಂದುಕೊಳ್ಳೋಣ ಆದರೆ ನೀವು ಕಾರಣಾಂತರಗಳಿಂದ ಅಥವಾ ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಹೋಗಿದ್ದರೆ ನಿಮ್ಮ ಅಡ್ರೆಸ್ ಅನ್ನು ಚೇಂಜ್ ಮಾಡಿಕೊಳ್ಳಬಹುದು.

ಎಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬೇಕು(new ration card application start today)

ನೀವೇನಾದರೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ ನಿಮ್ಮ ಹತ್ತಿರದ ಈ ಕೆಳಗಿನ ಆನ್ಲೈನ್ ಸೆಂಟರಗಳಲ್ಲಿ ಅವಕಾಶ ನೀಡಲಾಗಿದೆ

1) ಗ್ರಾಮ ಒನ್ :- ಈ ಆನ್ಲೈನ್ ಸೆಂಟರ್ ಮೂಲಕ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು

2) ಕರ್ನಾಟಕ ಒನ್:- ನಿಮ್ಮ ಹತ್ತಿರದ ಕರ್ನಾಟಕ ಒನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು

3) ಬೆಂಗಳೂರು ಒನ್:- ಬೆಂಗಳೂರು ಪ್ರದೇಶದಲ್ಲಿ ವಾಸ ಮಾಡುವವರು ಈ ಆನ್ಲೈನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು

ಈ ಮೇಲ್ಕಾಣಿಸಿದ ಆನ್ಲೈನ್ ಸೆಂಟರ್ನಲ್ಲಿ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಹಾಗೂ ಬೇರೆ ಯಾವುದೇ ಆನ್ಲೈನ್ ಸೆಂಟರ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ

ಹೊಸ ರೇಷನ್ ಕಾರ್ಡಿಗೆ ಬೇಕಾಗುವ ದಾಖಲಾತಿಗಳು

1) ಆಧಾರ್ ಕಾರ್ಡ್

2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ

3) ಇತ್ತೀಚಿನ ಭಾವಚಿತ್ರ

4) ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್

5) ಯಾವುದಾದರೂ ಒಂದು ಮೊಬೈಲ್ ಸಂಖ್ಯೆ

 

ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲಾತಿಗಳು

1) ಆಧಾರ್ ಕಾರ್ಡ್

2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ

3) ಇತ್ತೀಚಿನ ಭಾವಚಿತ್ರ

4) ಯಾವುದಾದರೂ ಒಂದು ಮೊಬೈಲ್ ನಂಬರ್

5) ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್

ಈ ಮೇಲ್ಕಾಣಿಸಿದ ಎಲ್ಲಾ ದಾಖಲಾತಿಗಳ ಒಂದು ಜೆರಾಕ್ಸ್ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ

ಈಗಂತೂ ಸರಕಾರ ಯಾವುದೇ ಒಂದು ಯೋಜನೆಯನ್ನು ಜಾರಿಗೆ ತಂದರೆ ಅದಕ್ಕೆ ಒಂದು ರೇಷನ್ ಕಾರ್ಡ್ ( BPL & APL ) ಆಧಾರವಾಗಿ ಪರಿಗಣಿಸಲಾಗುತ್ತೆ.

BPL Ration Card: – ಬಿಪಿಎಲ್ ರೇಷನ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುತ್ತೆ.

ಬಿಪಿಲ್ ರೇಷನ್ ಕಾರ್ಡನ್ನು ಹೊಂದಿರುವ ಕುಟುಂಬಗಳನ್ನು ಬಡವರು ಎಂದು ಸರಕಾರ ಗುರುತಿಸಲಾಗುತ್ತೆ ಅಂತವರಿಗೆ ಸರಕಾರ ಕಡೆಯಿಂದ ಬಿಪಿಎಲ್ ಕಾರ್ಡ್ ಆಧಾರವನ್ನಾಗಿಟ್ಟುಕೊಂಡು ಸುಮಾರು ಯೋಜನೆಗಳನ್ನು ಜಾರಿಗೆ ತರುತ್ತೆ.

APL Ration Card:- ಎಪಿಎಲ್ ರೇಷನ್ ಕಾರ್ಡನ್ನು ಮಾಧ್ಯಮ ವರ್ಗದವರಿಗೆ ಮತ್ತು ಸಿರಿಮಂತರಿಗೆ ಎಪಿಎಲ್ ರೇಷನ್ ಕಾರ್ಡನ್ನು ನೀಡಲಾಗುತ್ತೆ.

ಎಪಿಎಲ್ ರೇಷನ್ ಕಾರ್ಡ್ ನಿಂದ ಸರ್ಕಾರ ನೀಡುವಂತಹ ಕೆಲವೊಂದು ಯೋಜನೆಗಳ ಬೆನಿಫಿಟ್ಟನ್ನು ಪಡೆಯಬಹುದಾಗಿದೆ

ರೇಷನ್ ಕಾರ್ಡ್ ನಿಂದ ಏನು ಉಪಯೋಗ

ನಿಮ್ಮ ಹತ್ತಿರ ಏನಾದರೂ ಒಂದು ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಸಹಕಾರ ಕಡೆಯಿಂದ ಕನಿಷ್ಠ ಏನಿಲ್ಲ ಅಂದರೂ ತಿಂಗಳಿಗೆ 5000 ರೂಪಾಯಿ ವರೆಗೆ ಕರ್ನಾಟಕ ಸರಕಾರ ಕಡೆಯಿಂದ ಅಥವಾ ಯಾವುದೇ ಸರಕಾರ ಕಡೆಯಿಂದ ಸಹಾಯವನ್ನು ಪಡೆಯಬಹುದು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

CLICK HERE 

BPL Ration Card ನಿಂದ ಆಗುವ ಉಪಯೋಗಗಳು

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ಪ್ರಮುಖ ಮೂರು ಯೋಜನೆಯನ್ನು ಪಡೆಯಬೇಕಾದರೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತೆ.

1) ಗೃಹಲಕ್ಷ್ಮಿ ಯೋಜನೆ :- ಇದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು ಗ್ಯಾರೆಂಟಿ ಆಗಿದೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಸರ್ಕಾರ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಮೂಲಕ 2000 ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ

ಗೃಹಲಕ್ಷ್ಮಿ ಯೋಜನೆಯಿಂದ ಇಲ್ಲಿವರೆಗೂ ರೇಷನ್ ಕಾರ್ಡ್ ಇದ್ದವರು ಸುಮಾರು 14 ಸಾವಿರ ರೂಪಾಯಿ ಲಾಭ ಪಡೆದಿದ್ದಾರೆ

ಅನ್ನ ಭಾಗ್ಯ ಯೋಜನೆ:- ಈ ಯೋಜನೆ ಮೂಲಕ ಬಿಪಿಎಲ್ ಮತ್ತು ಅಂಥೋದೆಯ ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿಯನ್ನು ವಿತರಣೆ ಮಾಡಲಾಗುತ್ತೆ

ಇದರಲ್ಲಿ ಕೇಂದ್ರ ಸರಕಾರದ ಗರೀಬ್ ಕಲ್ಯಾಣ್ ಯೋಜನೆ ಮೂಲಕ 5 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡಲಾಗುತ್ತೆ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಅನ್ನ ಭಾಗ್ಯ ಯೋಜನೆ ಮೂಲಕ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ನೀಡುತ್ತವೆ ಎಂದು ಘೋಷಣೆ ಮಾಡಿದ್ದರು ಆದರೆ ಅಕ್ಕಿಯ ಅಭಾವದಿಂದ ರೇಷನ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ 5 ಕೆಜಿಯ ಅಕ್ಕಿಯ ಹಣವನ್ನು ಕುಟುಂಬದ ಮುಖ್ಯಸ್ಥರಾದ ಮಹಿಳೆಯಾರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ

ಅಂದರೆ ರೇಷನ್ ಕಾರ್ಡ್ ನಲ್ಲಿರುವ ಒಬ್ಬ ಸದಸ್ಯರಿಗೆ ಪ್ರತಿ ತಿಂಗಳು 170 ರೂ ಗಳಂತೆ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೆ ಅಷ್ಟು ಜನರ ಹಣವನ್ನು ಕುಟುಂಬದ ಮುಖ್ಯಸ್ಥರಾದ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತೆ.

ಗೃಹಜೋತಿ ಯೋಜನೆ:- ಈ ಯೋಜನೆಯ ಮೂಲಕ ಕಾಂಗ್ರೆಸ್ ಸರಕಾರವು ಮನೆಬಳಕೆಗೆ ಉಪಯೋಗಿಸುವಂತಹ ವಿದ್ಯುತ್ ಅನ್ನು ಸುಮಾರು 200 ಯೂನಿಟ್ ವರಗಳಿಗೆ ಉಚಿತ ಎಂದು ಘೋಷಣೆ ಮಾಡಿದೆ

ಈ ಮೇಲ್ಕಾಣಿಸಿದ ಎಲ್ಲಾ ಉಪಯೋಗಗಳಲ್ಲದೆ ಇನ್ನು ರೇಷನ್ ಕಾರ್ಡ್ ಗಳಿಂದ ತುಂಬಾ ಉಪಯೋಗವಿದೆ

ಈ ಲೇಖನಿಯು ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ ಈ ಲೇಖನ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಹತ್ತಿರದ ಸ್ನೇಹಿತರೆ ಈ ಲೇಖನೆಯನ್ನು ಶೇರ್ ಮಾಡಿ

ನಮ್ಮ ಪ್ರೀತಿಯ ಓದುಗರೇ ತಿಳಿಸುವುದೇನೆಂದರೆ ಈ ವೆಬ್ಸೈಟ್ ಮೂಲಕ ಪ್ರತಿನಿತ್ಯವೂ ನಿಖರವಾದ ಮಾಹಿತಿಯನ್ನು ಪ್ರತಿದಿನ ಪೋಸ್ಟ್ ಮಾಡುತ್ತೇವೆ ಆದ್ದರಿಂದ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಅನ್ನು ಆನ್ ಮಾಡಿಕೊಳ್ಳಿ

ಇದನ್ನು ಓದಿ :Anna bhagya yojana |ಅನ್ನ ಭಾಗ್ಯ ಯೋಜನೆ ಹಣ ಇನ್ನು ಬಂದಿಲ್ವಾ |ಈ ಕೆಲಸ ಮಾಡಿ ಸಾಕು…!

Leave a Comment