ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸಿದ್ದರಾಗಿ ! ಈ ದಾಖಲೆ ಕೂಡ ಇಟ್ಟುಕೊಳ್ಳಿ New Ration Card application 2024 Keep this documents

New Ration Card application 2024

 New Ration Card application 2024 :       ನಮಸ್ಕಾರ ಗೆಳೆಯರೇ ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ನಾವು ನಿಮಗೆ ಈ ಮಾಧ್ಯಮದ ಮುಖಾಂತರ ತಿಳಿಸುವುದೇನೆಂದರೆ ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅಂತವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್  ನೀಡಲಾಗಿದೆ, ಅದು ಏನೆಂದರೆ  ಆಹಾರ ಮತ್ತು ನಾಗರಿಕ ಸರಬರಾಜು  ಸಚಿವರಾದ ಕೆ ಎಚ್ ಮುನಿಯಪ್ಪನವರು  ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದರ ಬಗ್ಗೆ ಮಾಹಿತಿ ನೀಡಿದ್ದಾರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಮತ್ತು ಬೇಕಾದ ದಾಖಲೆಗಳ ವಿವರ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ನಿಮಗೆ ತಿಳಿಸಿಕೊಡಲಾಗುತ್ತದೆ ಅದಕ್ಕಾಗಿ ಈ ಲೇಖನವನ್ನು ಕೊನೆವರೆಗೂ ನೋಡಿ.

ಗೆಳೆಯರೇ ನಾವು ಈ ಮಾಧ್ಯಮದಿಂದ ದಿನನಿತ್ಯ ಹೊಸ ಹೊಸ ವಿಚಾರಗಳು ಹೊಸ ಮಾಹಿತಿಯನ್ನು ನಿಮಗೆ ದಿನಾಲು ಪರಿಚಯಿಸುತ್ತೇವೆ, ಅದು ಏನೆಂದರೆ ಸರಕಾರಿ ಕೆಲಸ ಆಗಿರಬಹುದು ಸರಕಾರಿ ಯೋಜನೆಗಳಾಗಿರಬಹುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ಏಕೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಹಾಗೂ ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ನಾವು ಸಹಾಯ ಮಾಡುತ್ತೇವೆ,ಸರ್ಕಾರದಿಂದ ಬಿಡುಗಡೆಯಾಗುವ ಯಾವುದೇ ಸುದ್ದಿಯನ್ನು ನಿಮಗೆ ಈ ಮಾಧ್ಯಮದ ಮುಖಾಂತರ ತಲುಪಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ ಅದಕ್ಕಾಗಿ ನೀವು ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಹಾಕುವ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ನಿಮಗೆ ತಲುಪುತ್ತದೆ,

ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದೀರಾ ಹಾಗಾದ್ರೆ ಈ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ, ಅದು ಯಾವ ಯಾವ ದಾಖಲೆ ಎಂದು ನನ್ನ ಲೇಖನದ ಕೆಳಭಾಗದಲ್ಲಿ ನೀಡಿರುತ್ತೇನೆ ಈ ಲೇಖನವನ್ನು ಕೊನೆಯವರೆಗೂ ನೋಡಿ.

New Ration Card application 2024 : ಯಾವುದೇ ವ್ಯಕ್ತಿಯು ನಮ್ಮ ದೇಶದ ಪ್ರಜೆ ಎನಿಸಿಕೊಳ್ಳಲು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಹೀಗೆ ಇನ್ನು ಹಲವು ರೀತಿಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಆಗಿದ್ದರೆ ಆ ಪ್ರಜೆ ಭಾರತೀಯನಾಗುತ್ತಾನೆ.

ಹಾಗೂ ಭಾರತ ದೇಶದ ಪ್ರಜೆ ಎನಿಸಿಕೊಳ್ಳಲು ರೇಷನ್ ಕಾರ್ಡ್ ನು ಬಹು ಮುಖ್ಯವಾಗಿದೆ, ರೇಷನ್ ಕಾರ್ಡ್ ಇವಾಗ ಒಂದು ಗುರುತಿನ ಚೀಟಿ ಅಷ್ಟೇ ಅಲ್ಲದೆ, ನಮ್ಮ ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಆಧಾರ ಸ್ತಂಭವಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ,

ಹಾಗಾಗಿ ಇಂದು ಪಡಿತರ ಚೀಟಿಯು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಹಳ ಪ್ರಮುಖ ಸ್ಥಾನ ಪಡೆದುಕೊಂಡಿದೆ, ಇದೀಗ ರೇಷನ್ ಕಾರ್ಡ್ ಇಲ್ಲದವರಿಗೆ ರಾಜ್ಯ ಸರ್ಕಾರವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ, ಇಲ್ಲಿಯವರೆಗೂ ಯಾರ ಬಳಿ ರೇಷನ್ ಕಾರ್ಡ್ ಎಲ್ಲವೂ ಅಂತವರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಪ್ರಮುಖವಾಗಿ ಬೇಕಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ

ರಾಜ್ಯ ಸರ್ಕಾರವು ಪಡಿತರ ಚೀಟಿಯ ಬಗ್ಗೆ ಆಗಾಗ ಸಣ್ಣಪುಟ್ಟ ಮಾಹಿತಿಯನ್ನು ನೀಡುತ್ತಾ ಇರುತ್ತೆ ಇಲ್ಲಿಯವರೆಗೆ ಅಂದರೆ ನೀವು ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ ಅಂತ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಅವರಿಗೆ ಮಾರ್ಚ್ 31ರ ಒಳಗಾಗಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುತ್ತಿದೆ. ಇಲ್ಲಿಯವರೆಗೂ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅಭ್ಯರ್ಥಿಗಳಿಗೆ ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪನವರು ಘೋಷಣೆ ಮಾಡಿದ್ದಾರೆ.

ಮಾರ್ಚ್ 31ರ ಒಳಗಾಗಿ ಎಷ್ಟು ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿದುಕೊಳ್ಳಿ

ಈಗಾಗಲೇ ಹೊಸ ಪಡಿತರ ಚೀಟಿಗೆ 2,95, 986 ಅರ್ಜಿಗಳು ಬಂದಿವೆ, ಈ ಅರ್ಜಿಗಳ ಆದ್ಯತೆ ಮೇಲೆ ಪರಿಗಣಿಸಿ ಮಾರ್ಚ್ 31ರ ಒಳಗಾಗಿ ವಿಲೇ ಮಾಡಲು ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೆ ಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

ಹೀಗಾಗಿ ಹೊಸ ಪಡಿತರ ಚೀಟಿ ವಿತರಣೆ ಕಾರ್ಯವು ಪ್ರಗತಿಯಲ್ಲಿದೆ ಮಾರ್ಚ್ 31ರ ಒಳಗೆ ಎಲ್ಲಾ ಪಡಿತರ ಚೀಟಿಗಳನ್ನು ವಿತರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ, ಮತ್ತು ಹೊಸ ಪಡಿತ ಚೀಟಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 1 ರಿಂದ ಅರ್ಜಿಗಳನ್ನು ಆಹ್ವಾನಿಸುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಒಮ್ಮೆ ಓದಿ :

ಟಾಟಾ ಗ್ರೂಪ್ ನಿಂದ 10 ಲಕ್ಷ ಸ್ಕಾಲರ್ಶಿಪ್ |ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ|tata groups scholorship!

ಹೊಸ ಪಡಿತರ ಚೀಟಿ ಪಡೆಯಲು ನೀಡಬೇಕಾದ ದಾಖಲೆಗಳು.

  • ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಸ್ವಯಂ ಘೋಷಿತ ಪ್ರಮಾಣದ ಪತ್ರ
  • ಚಾಲನ ಪರವಾನಿಗೆ
  • ಸದಸ್ಯರ ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
  • ಮತ್ತು ಮನೆಯ ಸದಸ್ಯರ ಮಾಹಿತಿ ನೀಡಬೇಕಾಗುತ್ತದೆ

ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದರೆ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ ಅದಕ್ಕಾಗಿ ನೀವು ಈಗಲೇ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದಾಗ ಗ್ರಾಮ್ ಒನ್ ಅಥವಾ ಸಿಎಸ್ಸಿ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ.

ಹೊಸ ಪಡಿತರ ಚೀಟಿ ಪಡೆಯಲು ಇರಬೇಕಾದ ಅರ್ಹತೆಗಳು.

  • ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು
  • ಈಗಾಗಲೇ ಪಡಿತರ ಚೀಟಿ ಹೊಂದಿದವರು ಅರ್ಜಿ ಸಲ್ಲಿಸುವಂತಿಲ್ಲ
  • ನೂತನವಾಗಿ ಮದುವೆಯಾದ ದಂಪತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
  • ಸದಸ್ಯರ ಕುಟುಂಬದ  ಆದಾಯದ ಮೇಲೆ ಪರಿಗಣಿಸಿ ಬಿಪಿಎಲ್(BPL)  ಪಡಿತರ ಚೀಟಿ ಅಥವಾ ಎಪಿಎಲ್(APL) ಪಡಿತರ ಚೀಟಿ ನೀಡಬೇಕು ಎಂದು ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ಕರ್ನಾಟಕ ರಾಜ್ಯದ ಆಹಾರ ಇಲಾಖೆಗೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಂಡು ಅರ್ಜಿ  ಸಲ್ಲಿಸಬಹುದಾಗಿದೆ.

https://ahara.kar.nic.in/Home/EServices

ಇದು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅದರ ಮೇಲೆ ಕ್ಲಿಕ್ ಮಾಡಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ.

ಇದನ್ನೂ ಒಮ್ಮೆ ಓದಿ :

ರೇಷನ್ ಕಾರ್ಡ್ ಅಪ್ಡೇಟ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ! ಆಹಾರ ಸರಬರಾಜು ಇಲಾಖೆಯಿಂದ ಪಟ್ಟಿ ಬಿಡುಗಡೆ. Ration card update list

ವಿಶೇಷ ಸೂಚನೆ

ನಾವು ನಮ್ಮ ಮಾಧ್ಯಮದಲ್ಲಿ ಹಾಕುವ ಯಾವುದೇ ಸರ್ಕಾರಿ ಕೆಲಸ ಆಗಿರ ಬಹುದು ಮತ್ತು ಸರಕಾರಿ ಯೋಜನೆಯ ಮಾಹಿತಿ ಆಗಿರಬಹುದು ಇತ್ತೀಚಿನ ಜಾಲತಾಣದಲ್ಲಿ ಹರಿದಾಡುವ ಮಾಹಿತಿಯಾಗಿರುತ್ತದೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿ ನೀಡುವುದಿಲ್ಲ.

Leave a Comment