Anna bhagya yojana : ನಮಸ್ಕಾರ ಪ್ರೀತಿಯ ಓದುಗರಿಗೆ . ಈ ಒಂದು ವರದಿಯ ಮೂಲಕ ಅನ್ನ ಭಾಗ್ಯ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೇವೆ.ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಯ ಮುಖಾಂತರ ಅಕ್ಕಿಯ ಬದಲಿಗೆ ಹಣವನ್ನು ನೇರವಾಗಿ ರೇಷನ್ ಕಾರ್ಡ್ ಹೊಂದಿದವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಈ ಯೋಜನೆಯ ಹಣ ನಿಮಗೂ ಬಂದಿದೆಯಾ?ಯಾರ ಖಾತೆಗೆ ಬಂದಿದೆ? ಎಸ್ಟು ಹಣ ಬಂದಿದೆ?ಹೇಗೆ ಚೆಕ್ ಮಾಡುವುದು? ಆಹಾರ ಇಲಾಖೆಯ ಯಾವ ವೆಬ್ ಸೈಟ್ ನಲ್ಲಿ ಚೆಕ್ ಮಾಡುವುದು?ಎಂಬ ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಅಕ್ಕಿಯ ಕೊರತೆಯಿಂದ ರಾಜ್ಯ ಸರ್ಕಾರವು ಅಕ್ಕಿಯ ಬದಲು ಹಣವನ್ನು ನೀಡುವ ನಿರ್ಧಾರವನ್ನು ಮಾಡಿದೆ.ಈ ಸರ್ಕಾರದ ಘೋಷಣೆಯಂತೆ 5ಕೆಜಿ ಅಕ್ಕಿಯ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ DBT ಯ ಮೂಲಕ ನೇರವಾಗಿ ಕಾರ್ಡ್ ಹೊಂದಿದವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣವನ್ನು ಹಾಕಲಾಗುತ್ತಿದೆ. ಈ ಹಣವನ್ನು ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಹಣವನ್ನು ನೀವು ನಿಮ್ಮ ಮೊಬೈಲ್ ಫೋನ್ ಅಲ್ಲಿಯೇ ಆನ್ಲೈನ್ ಮೂಲಕ ತಿಳಿದುಕೊಳ್ಳಬಹುದು.
Anna bhagya yojana ಮೂಲಕ ಎಸ್ಟು ಹಣ ಬರುತ್ತದೆ ?
ಈ ಅನ್ನ ಭಾಗ್ಯ ಯೋಜನೆಯ ಮುಖಾಂತರ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5kg ಗೆ ಒಟ್ಟು 170 ರೂಪಾಯಿಯನ್ನು ಒಬ್ಬ ಸದಸ್ಯನಿಗೆ ನೀಡುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೂ ಸದಸ್ಯರಿಗೆ ಅನುಸಾರ ಹಣವನ್ನು ನೇರವಾಗಿ ರೇಷನ್ ಕಾರ್ಡ್ ಮುಕ್ಯಸ್ತೆಯ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತಿದೆ. ಈ ಹಣವನ್ನು ಪ್ರತಿ ತಿಂಗಳಿಗೊಮ್ಮೆ ಜಮ ಮಾಡಲಾಗುತ್ತದೆ.
ಈ ಅನ್ನ ಭಾಗ್ಯ ಯೋಜನೆಯ ಹಣವನ್ನು ಸರ್ಕಾರವು ಪ್ರತಿ ತಿಂಗಳು 15 ನೇ ದಿನಾಂಕದ ಒಳಗೆ ಜಮಾ ಮಾಡುತ್ತೇವೆ ಎಂಬ ಭರವಸೆಯನ್ನು ಕೂಡ ನೀಡಿದೆ. ಈ ಮಾತಿನಂತೆಯೇ ಪ್ರತಿ ತಿಂಗಳು ಹಣವನ್ನು ಜಮಾ ಮಾಡುತ್ತಿದೆ. ಜನೇವರಿ ತಿಂಗಳ ಹಣವನ್ನು ಫೆಬ್ರುವರಿ ಅಲ್ಲಿ ಮತ್ತು ಫೆಬ್ರುವರಿ ತಿಂಗಳ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಈ ರೀತಿ ಪ್ರತಿ ತಿಂಗಳ ಹಣವನ್ನು ರೇಷನ್ ಕಾರ್ಡ್ ಹೊಂದಿದ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ.
(Anna bhagya yojana) ರೇಷನ್ ಕಾರ್ಡ್ ಸ್ಟೇಟಸ್ :
ನಿಮ್ಮ ರೇಷನ್ ಕಾರ್ಡ್ ನ ಅನ್ನ ಭಾಗ್ಯ ಯೋಜನೆಯ ಸ್ಟೇಟಸ್ ಹೇಗಿದೆ,ಏನಾದರೂ ಸಮಸ್ಯೆ ಇವೆಯೇ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
1. ಈ ಕೆಳಗೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.
2. Ex-service ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
3. DBT STATUS ಲಿಂಕ್ ಮೇಲೆ ಕ್ಲಿಕ್ ಮಾಡಿ.
4. ಅಲ್ಲಿ ನಿಮ್ಮ ರೇಷನ್ ಕಾರ್ಡ್ ನ ಯಾವ ದಿನದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರಿ ಅದನ್ನು ಭರ್ತಿ ಮಾಡಿ.
5. ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ continue ಅಂತ ಕ್ಲಿಕ್ ಮಾಡಿ.
6. ನಂತರ ನಿಮ್ಮ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಅನ್ನ ಭಾಗ್ಯ ಯೋಜನೆಯ ಎಲ್ಲಾ ಮಾಹಿತಿ ಬರುತ್ತದೆ.
7. ನಂತರ ಏನಾದರೂ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಳ್ಳಿ.
ನಿಮ್ಮ ಅನ್ನ ಭಾಗ್ಯ ಯೋಜನೆಯ ಸ್ಥಿತಿ ತಿಳಿದುಕೊಳ್ಳಿ.
(Anna bhagya yojana) Ration Card correction:
ನೀವು ನಿಮ್ಮ ಮೋಬೈಲ್ ಅಲ್ಲಿಯೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದು .ತಿದ್ದುಪಡಿ ಮಾಡಲು ಪಾಲಿಸುವ ಹಂತಗಳು ಕೆಳಗೆ ನೀಡಲಾಗಿದೆ.ಇದನ್ನು ಸಂಪೂರ್ಣ ನೋಡಿಕೊಂಡು ನೀವು ತಿದ್ದುಪಡಿ ಮಾಡಿಕೊಳ್ಳಿ.
•ಈ ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
•ಅಲ್ಲಿ E-service ಅಂತ ಸೆಲೆಕ್ಟ್ ಮಾಡಿಕೊಳ್ಳಿ.
•ಅದಾದ ಮೇಲೆ ತಿದ್ದುಪಡಿಯ ವಿನಂತಿ ಅಂತ ಇರುತ್ತೆ ಅದನ್ನು ಕ್ಲಿಕ್ ಮಾಡಿ.
•ನಂತರ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
•ಕೇಳಿರುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ.ಅವುಗಳ ಫೋಟೊ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
•ಕೊನೆಯದಾಗಿ ಅರ್ಜಿಯನ್ನು submit ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಈ ರೀತಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ಪರಿಹರಿಸಿ.ನಿಮಗೂ ಕೂಡ ಈ ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ಲ ಅಂದರೆ ಬರುತ್ತದೆ.ಮೊದಲು ಮೇಲೆ ತಿಳಿಸಿದಂತೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನೂ ತಿಳಿದುಕೊಳ್ಳಿ.ನಂತರ ಯಾವುದಾದರೂ ತೊಂದರೆ ಇದ್ದರೆ ಪರಿಹರಿಸಿಕೊಳ್ಳಿ.
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.