Post office recruitment 2024 : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮೂಲಕ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಈ ಹುದ್ದೆಗಳಿಗೆ 10 & 12ನೇ ತರಗತಿ ಪಾಸಾದ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಮಾಹಿತಿಯನ್ನು ಸಂಪೂರ್ಣ ಓದಿ ಈಗಲೆ ಅರ್ಜಿ ಸಲ್ಲಿಸಿ.
ಹೌದು ಗೆಳೆಯರೇ ಮೇಲೆ ಹೇಳಿದಂತೆ ಇಂಡಿಯನ್ ಪೋಸ್ಟ್ ಇಲಾಖೆಯಲ್ಲಿ ಒಟ್ಟು 98,083 ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅಧಿಸೂಚನೆಯ ನಂತರ ಅರ್ಜಿಯ ದಿನಾಂಕ ಮತ್ತು ಕೊನೆಯ ದಿನಾಂಕದ ಬಗ್ಗೆ ಮಾಹಿತಿ ತಿಳಿಯುತ್ತದೆ. ಈ ನೇಮಕಾತಿಯ ಪರೀಕ್ಷೆಯ ಮೂಲಕ ನಡೆಯುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
ಒಟ್ಟು 98,083 ದೇಶದಾದ್ಯಂತ ಖಾಲಿ ಇರುವ ಹುದ್ದೆಗಳಲ್ಲಿ ನಮ್ಮ ಕರ್ನಾಟಕದಲ್ಲಿ ಎಸ್ಟು ಹುದ್ದೆಗಳು ಖಾಲಿ ಇವೆ? ಯಾವ ಹುದ್ದೆಗಳು ಖಾಲಿ ಇವೆ?ಅರ್ಜಿ ಹಾಕಲು ಅರ್ಹತೆಗಳು ಏನು?ಬೇಕಾಗುವ ದಾಖಲಾತಿಗಳು ಯಾವುವು?ಅರ್ಜಿ ಸಲ್ಲಿಸುವ ವಿಧಾನ ?ಮುಂತಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದೆ.(Post office recruitment 2024)
Post office recruitment 2024 ರ ವಿವರ :
ಒಟ್ಟು 98,083 ಹುದ್ದೆಗಳು ಖಾಲಿ ಇದ್ದು ಸದ್ಯದಲ್ಲಿಯೇ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಮತ್ತು ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ನೀಡಲಾಗುತ್ತದೆ.ಸದ್ಯ ಅಂಚೆ ಇಲಾಖೆಯಿಂದ ಯಾವುದೇ ಅಧಿಕೃತ ನೋಟಿಫಿಕೇಶನ್ ಬಂದಿಲ್ಲ ಅದಾದ ನಂತರ ಅರ್ಜಿ ಹಾಕಲು ಆರಂಭದ ದಿನಾಂಕ ಮತ್ತು ಕೊನೆಯ ದಿನಾಂಕ ತಿಳಿಯುತ್ತದೆ .
ಒಟ್ಟು 98,083 ಖಾಲಿ ಇರುವ ಹುದ್ದೆಗಳಲ್ಲಿ ಜಿಡಿಎಸ್ (gramin Dak sevak), ಎಂಟಿಎಸ್, ಪೋಸ್ಟ್ ಮ್ಯಾನ್, ಪೋಸ್ಟಲ್ ಅಸಿಸ್ಟಂಟ್, ಸೋರ್ಟಿಂಗ್ ಅಸಿಸ್ಟಂಟ್, ಮೇಲ್ ಗಾರ್ಡ್ ಮತ್ತು ಇನ್ನಿತರ ವಿವಿಧ ಹುದ್ದೆಗಳು ಇವೆ. ಈ ಹುದ್ದೆಗಳಿಗೆ 10 & 12ನೇ ಪಾಸಾದ ವಿಧ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Post office recruitment 2024 ರ ಕರ್ನಾಟಕದಲ್ಲಿ ಇರುವ ಹುದ್ದೆಗಳ ವಿವರ :
ಕರ್ನಾಟಕದಲ್ಲಿ ಒಟ್ಟು 5731 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹೊರದಿಸಲಾಗುತ್ತದೆ. ಈ ಹುದ್ದೆಗಳಿಗೆ 10 &12 ನೇ ಪಾಸದವಾರು ಅರ್ಜಿ ಸಲ್ಲಿಸಬಹುದು.ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು.
•ಒಟ್ಟು ಹುದ್ದೆಗಳು – 5731
•ಪೋಸ್ಟ್ ಮ್ಯಾನ್ – 3887
•ಎಂಟಿಎಸ್ – 1784
•ಮೇಲ್ ಗಾರ್ಡ್. – 90
Post office recruitment 2024 ಕ್ಕೆ ಬೇಕಾಗುವ ದಾಖಲಾತಿಗಳು ಯಾವುವು ?
ಈ ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಕೆಲವು ವೈಯಕ್ತಿಕ ಮತ್ತು ಶೈಕ್ಷಣಿಕ ದಾಖಲೆಗಳನ್ನು ಕೇಳುತ್ತಿದ್ದ ಅದಲ್ಲದೆ ಡಾಕ್ಯುಮೆಂಟ್ verification ಸಮಯದಲ್ಲೂ ಕೂಡ ಈ ಕೆಳಗೆ ನೀಡಿರುವ ದಾಖಲಾತಿಗಳ ಒರಿಜಿನಲ್ ಪ್ರತಿ ಬೇಕಾಗುತ್ತದೆ.
•ಆಧಾರ್ ಕಾರ್ಡ್
•ಫೋಟೋ & ಸಿಗ್ನೇಚರ್
•10 & 12 ನೇ ಮಾರ್ಕ್ಸ್ ಕಾರ್ಡ್
•ವಾಸಸ್ಥಳ ಪ್ರಮಾಣ ಪತ್ರ
•ಕಂಪ್ಯೂಟರ್ ಪ್ರಮಾಣ ಪತ್ರ
ಇದನ್ನು ಓದಿ:Anna bhagya yojana |ಅನ್ನ ಭಾಗ್ಯ ಯೋಜನೆ ಹಣ ಇನ್ನು ಬಂದಿಲ್ವಾ |ಈ ಕೆಲಸ ಮಾಡಿ ಸಾಕು…!
Post office recruitment 2024 ವಯಸ್ಸಿನ ಮಿತಿ :
ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಕನಿಷ್ಟ 18 ವರ್ಷ ಮತ್ತು ಗರಿಷ್ಠ 40 ವರ್ಷದ ಒಳಗೆ ಇರಬೇಕು.
ವಯಸ್ಸಿನ ಸಡಿಲಿಕೆ:
•ಸಾಮಾನ್ಯ ವರ್ಗದವರು – 3 ವರ್ಷ
•SC/ST ವಿದ್ಯಾರ್ಥಿಗಳಿಗೆ – 5 ವರ್ಷ
•PwD ವಿದ್ಯಾರ್ಥಿಗಳಿಗೆ. – 10 ವರ್ಷ
ಅರ್ಜಿಯ ಶುಲ್ಕ :
•ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ – 100 ರೂ
•sc/st ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ .
ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Post office recruitment 2024 ಅರ್ಜಿ ಹಾಕುವ ಮಾಹಿತಿ :
ಈ ಹುದ್ದೆಗಳಿಗೆ ಅರ್ಜಿ ಹಾಕಲು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಸೂಚನೆ ಹೊರಡಿಸಿದ ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವಾಗ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಿ.ಅರ್ಜಿಯನ್ನು ಭರ್ತಿ ಮಾಡಿ ಕೊನೆಯದಾಗಿ ನಿಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್ಲೈನ್ ಅಲ್ಲಿ ಪಾವತಿಸಿ.
Post office recruitment 2024 ರ ಆಯ್ಕೆ ಪ್ರಕ್ರಿಯೆ :
•ಈ ಹುದೆಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
•100 ಅಂಕಗಳಿಗೆ 3 ಗಂಟೆಗಳ ಕಾಲ ಪರೀಕ್ಷೆ ಇರುತ್ತದೆ.
•ಇದರಲ್ಲಿ ಹಿಂದಿ,ಇಂಗ್ಲಿಷ್,ಗಣಿತ ,ರೀಸನಿಂಗ್ ಈ ನಾಲ್ಕು ವಿಷಯಗಳ ತಲ 25 ಅಂಕಾಗಳಿರುತ್ತವೆ.
•ಕಂಪ್ಯೂಟರ್ ಕಲಿಕೆಯ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಪ್ರತಿ ದಿನ ಈ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
ಉದ್ಯೋಗ ಮಾಹಿತಿ :ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ|4187 ಹುದ್ದೆಗಳು |ಈಗಲೇ ಅರ್ಜಿ ಸಲ್ಲಿಸ.PSI recruitment 2024 notification!