BBMP free laptop scheme
ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ :ನಮಸ್ಕರ ಸ್ನೇಹಿತರೆ ಈ ಒಂದು ಲೇಖನದಲ್ಲಿ ಬಿಬಿಎಂಪಿ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕದ ವಿಧ್ಯಾರ್ಥಿಗಳಿಗೆ ಫ್ರೀ ಲ್ಯಾಪ್ ಟ್ಯಾಪ್ ನೀಡಲು ಅರ್ಜಿಯನ್ನು ಕರೆಯಲಾಗಿತ್ತು. ಈ ಹಿಂದೆ ಅರ್ಜೀಯನ್ನು ಹಾಕಿದವರು ಕೆಲವು ದಾಖಲೆಗಳನ್ನು ನೀಡಿಲ್ಲ. ಅಂತವರಿಗೆ ಅರ್ಜಿ ತಿದ್ದುಪಡಿ ಮಾಡಲು ಇನ್ನು 10 ದಿನಗಳ ಕಾಲ ಅವಕಾಶ ನೀಡಿದೆ ಮತ್ತು ಹೊಸ ಆರ್ಜಿಯನ್ನು ಹಾಕಲು ಸಹ ಮತ್ತೆ 10 ದಿನಗಳ ಕಾಲ ಅವಕಾಶ ನೀಡಲಾಗಿದೆ.
ಹೌದು ವಿದ್ಯಾರ್ಥಿಗಳೇ ಮೇಲೆ ಹೇಳಿದಂತೆ ಈ ಹಿಂದೆ ಅರ್ಜಿ ಸಲ್ಲಿಸಿದ ವಿಧ್ಯಾರ್ಥಿಗಳು ಕೆಲವು ದಾಖಲೆಗಳನ್ನು ಸರಿಯಾಗಿ ನೀಡಿಲ್ಲ.ಅಂತವರು ಈಗ ಮತ್ತೊಮ್ಮೆ ಆನ್ಲೈನ್ ಮೂಲಕ ಅರ್ಜಿಯನ್ನು ತಿದ್ದುಪಡಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಬೇಕು. ಈ ತಿದ್ದುಪಡಿಯ ಜೊತೆಗೆ ಹೊಸದಾಗಿ ಅರ್ಜಿ ಹಾಕಲು ಸಹ ಮತ್ತೆ 10 ದಿನಗಳ ಕಾಲಾವಕಾಶ ನೀಡಲಾಗಿದೆ.
BBMP 2023 ನೇ ಬಜೆಟ್ ಘೋಷಣೆಯಲ್ಲಿ ಬೆಂಗಳೂರಿನ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್ ನೀಡಲು ಅರ್ಜಿಯನ್ನು ಕರೆದಿದೆ.ಇದರಿಂದ ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ತುಂಬಾ ಸಹಾಯವಾಗಿದೆ.ಆದ್ದರಿಂದ ನೀವೂ ಕೂಡ ಆರ್ಜೀಯನ್ನು ಸಲ್ಲಿಸಿ.
ಈಗಾಗಲೇ ಅರ್ಜಿ ಸಲ್ಲಿಸಿದ ವಿಧ್ಯಾರ್ಥಿಗಳು ಮತ್ತೆ ಯಾವ ದಾಖಲೆಗಳನ್ನು ಸಲ್ಲಿಸಬೇಕು, ಮತ್ತು ಅವುಗಳನ್ನು ಯಾವ ರೀತಿ ಅಪ್ಲೋಡ್ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಅರ್ಜಿ ಹಾಕಲು ಯಾವ ದಾಖಲೆಗಳನ್ನು ನೀಡಬೇಕು?
1. ವಿದ್ಯಾರ್ಥಿಯ ಆಧಾರ್ ಕಾರ್ಡ್
2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3. ವಿಧ್ಯಾರ್ಥಿ ವೇತನ ಪತ್ರ
4. ವಾಸಸ್ಥಳ ಪ್ರಮಾಣ ಪತ್ರ
5. ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ 15,000 ಸ್ಕಾಲರ್ಶಿಪ್ |ರಾಜ್ಯ ವಿಧ್ಯಾರ್ಥಿ ವೇತನ|ಈಗಲೆ ಅರ್ಜಿ ಸಲ್ಲಿಸಿ!
ಈಗಾಗಲೇ ಅರ್ಜಿ ಸಲ್ಲಿಸಿದವರು ಹೇಗೆ ಉಳಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು?
1. ಬಿಬಿಎಂಪಿ ಅಧಿಕೃತ ವೆಬ್ ಕ್ಯಾಮ್ ಮೇಲೆ ಕ್ಲಿಕ್ ಮಾಡಿ.
2. ನಂತರ ಫ್ರೀ ಲ್ಯಾಪ್ ಟ್ಯಾಪ್ ಯೋಜನೆಯ ಮೇಲೆ ಕ್ಲಿಕ್ ಮಾಡಿ.
3. ಅಪ್ಲಿಕೇಷನ್ ಸ್ಟೇಟಸ್ ಮತ್ತು ತಿದ್ದುಪಡಿ ಮೇಲೆ ಕ್ಲಿಕ್ ಮಾಡಿ.
4. ಮೊದಲು ನೀವು ಅರ್ಜಿ ಹಾಕುವಾಗ ನೀಡಿದ ಮೊಬೈಲ್ ನಂಬರ್ ಹಾಕಿ ಲಾಗಿನ್ ಆಗಿ.
5. ನಂತರ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ.
ಕೊನೆಯ ದಿನಾಂಕ:
ಈ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಮತ್ತು ಮೊದಲು ಅರ್ಜಿ ಸಲ್ಲಿಸಿದವರು ತಿದ್ದುಪಡಿ ಮಾಡಲು ಫೆಬ್ರುವರಿ 29 ನೇ ದಿನಾಂಕದ ತನಕ ಅವಕಾಶ ನೀಡಲಾಗಿದೆ.
ಉಚಿತ ಲ್ಯಾಪ್ ಟ್ಯಾಪ್ ಯೋಜನೆಯ ಲಾಭಗಳು:
ಬಿಬಿಎಂಪಿ ಯ ಅಮೃತ ಮಹೋತ್ಸವ ಸಮಾರಂಭ ಅಂಗವಾಗಿ ಬೆಂಗಳೂರು ವ್ಯಾಪ್ತಿ ಯಲ್ಲಿ ಬರುವ ಒಟ್ಟು 47 ಶಾಲೆಗಳ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಬಿಎಂಪಿ 152 ಕೋಟಿ ಹಣ ಘೋಷಣೆ ಮಾಡಿತ್ತು. ಈ ಹಣದಲ್ಲಿ ಸುಮಾರು 25 ಕೋಟಿ ಹಣವನ್ನು ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡಲು ಮೀಸಲು ಇಟ್ಟಿದ್ದೇವೆ ಎಂದು ಹೇಳಿತ್ತು.ಆದ್ದರಿಂದ ಈಗ ಬಿಬಿಎಂಪಿ ಯ ವ್ಯಾಪ್ತಿಗೆ ಬರುವ ಶಾಲೆಯ 10000 ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡುತ್ತಿದೆ.ಇದರಿಂದ ಬಡ ಮಕ್ಕಳು ಈಗಿನ ಕಾಲಮಾನಕ್ಕೆ ಬೇಕಾಗುವ ಡಿಜಿಟಲ್ ಶಿಕ್ಷಣ ಕಲಿಯಲು ಸಹಾಯ ಆಗುತ್ತದೆ.
BBMP 2023 -24 ನೇಯಾ ಸಾಲಿನ ಬಜೆಟ್ ಘೋಷಣೆಯಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡಲು 25 ಕೋಟಿ ಹಣವನ್ನು ಘೋಷಣೆ ಮಾಡಿತ್ತು.ಈಗಗಲೇ ಒಂದು ಬಾರಿ ಫ್ರೀ ಲ್ಯಾಪ್ ಟ್ಯಾಪ್ ಗೆ ಅರ್ಜಿಯನ್ನು ಕರೆದಿತ್ತು.ಆದರೆ ಈಗ ಘೋಷಣೆ ಮಾಡಿದ ಬಜೆಟ್ ಉಳಿದಿರುವ ಕಾರಣ ಮತ್ತೆ ಅರ್ಜಿ ಹಾಕಲು 10 ದಿನಗಳ ಕಾಲಾವಕಾಶ ನೀಡಿದೆ .ಆದ್ದರಿಂದ ಬಿಬಿಎಂಪಿ ವ್ಯಾಪ್ತಿಗೆ ಬರುವ ವಿಧ್ಯಾರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಮಾಹಿತಿ ನಿಮಗೆ ಉಪಯುಕ್ತ ಆಗಿದ್ದಲ್ಲಿ ಪ್ರತಿ ದಿನದ ಈ ರೀತಿಯ ನಿಮ್ಮ ಜಿಲ್ಲೆಯ ಸುದ್ದಿಗಳಿಗಾಗಿ ನಮ್ಮ ವೆಬ್ ಸೈಟ್ ಅನ್ನು subscribe ಮಾಡಿಕೊಳ್ಳಿ ಮತ್ತು ಎ ರೀತಿಯ ಮಾಹಿತಿ ಉಪಯೋಗವಾಗುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
ಇದನ್ನೂ ನೋಡಿ:BMTC ಯಲ್ಲಿ 2000 ಖಾಲಿ ಹುದ್ದೆಗಳ ನೇಮಕಾತಿ|10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ|BMTC recruitment 2024.